Webdunia - Bharat's app for daily news and videos

Install App

ಮಾದ ಮತ್ತು ಮಾನಸಿ, ಮಂಡ್ಯದ ಹುಡುಗರು ಸಿನಿಮಾ ನಾಳೆ ಬಿಡುಗಡೆ

Webdunia
ಗುರುವಾರ, 24 ನವೆಂಬರ್ 2016 (11:02 IST)
ಬೆಂಗಳೂರು: ಪ್ರಜ್ವಲ್ ದೇವರಾಜ್  ಸಿನಿಮಾವೊಂದು ಹಲವು ದಿನಗಳ ನಂತರ ಬಿಡುಗಡೆಯಾಗುತ್ತಿದೆ. ನಾಳೆ ಪ್ರಜ್ವಲ್ ಮತ್ತು ಶೃತಿ ಹರಿಹರನ್ ಅಭಿನಯದ ಮಾದ ಮತ್ತು ಮಾನಸಿ ಚಿತ್ರ ರಾಜ್ಯಾದ್ಯಂತ ತೆರೆ ಕಾಣಲಿದೆ. ಇದರ ಜತೆಗೆ ಮಂಡ್ಯದ ಹುಡುಗರು ಎಂಬ ಹೊಸಬರ ಚಿತ್ರವೂ ಬಿಡುಗಡೆಯಾಗಲಿದೆ.

ಸತೀಶ್ ಪ್ರಧಾನ್ ನಿರ್ದೇಶನದ ಮಾದ ಮತ್ತು ಮಾನಸಿಯಲ್ಲಿ ಚಿತ್ರದಲ್ಲಿ ಮನೋಮೂರ್ತಿ ಸಂಗೀತವೇ ಹೈಲೈಟ್. ಈಗಾಗಲೇ ಹಾಡುಗಳು ಸೂಪರ್ ಹಿಟ್ ಆಗಿವೆ. ಮನೋಮೂರ್ತಿ ನಿರ್ಮಾಣದಲ್ಲಿ ಮೂಡಿಬಂದಿರುವ ಚಿತ್ರವಿದು.

ಕಾಮಿಡಿ, ಆಕ್ಷನ್, ಸೆಂಟಿಮೆಂಟ್ ಎಲ್ಲವೂ ಸಿನಿಮಾದಲ್ಲಿದೆ. ಈಗಾಗಲೇ ದರ್ಶನ್ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿರುವ ಶೃತಿಗೆ ಈ ಸಿನಿಮಾ ನಿಜಕ್ಕೂ ಟರ್ನಿಂಗ್ ಪಾಯಿಂಟ್ ಎನ್ನುವುದು ಚಿತ್ರ ತಂಡದ ಮಾತು.

ಇನ್ನೊಂದು ಹೊಸಬರ ಚಿತ್ರ ಮಂಡ್ಯದ ಹುಡುಗರು. ಶ್ರೀನಿವಾಸ್ ಜೆ.ಜೆ. ಇದರ ನಿರ್ದೇಶನ, ನಿರ್ಮಾಣ, ಕತೆ ಎಲ್ಲಾ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ರಾಂ ಸಾಗರ್ ಮತ್ತು ಆಶಿಕಾ ಮುಖ್ಯ ಪಾತ್ರದಲ್ಲಿದ್ದಾರೆ. ಇದೊಂದು ಹಾರರ್ ಥ್ರಿಲ್ಲರ್ ಸಿನಿಮಾ ಎಂದು ಚಿತ್ರತಂಡ ಹೇಳಿಕೊಂಡಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಿಜವಾದ ಹೀರೋಗಳ ಬಗ್ಗೆ ಬಾಲಿವುಡ್ ಸೆಲೆಬ್ರಿಟಿಗಳು ಮಾತಾಡ್ತಿಲ್ಲ: ಪವನ್ ಕಲ್ಯಾಣ್ ಅಸಮಾಧಾನ

ಪ್ರೀತಿಸಿ ಮದುವೆಯಾದ ಗಾಯಕಿ ಪೃಥ್ವಿ- ಅಭಿಷೇಕ್‌ ಜೋಡಿಯ ಅದ್ಧೂರಿ ಆರತಕ್ಷತೆಗೆ ಸೆಲೆಬ್ರೆಟಿಗಳ ಸಾಥ್‌

Sitare Zameen Par: ಸಿನಿಮಾ ಬಾಯ್ಕಾಟ್ ಭಯಕ್ಕೆ ಎಕ್ಸ್ ಪೇಜ್ ಗೆ ತ್ರಿವರ್ಣ ಧ್ವಜ ಹಾಕಿದ ಅಮೀರ್ ಖಾನ್ ಸಂಸ್ಥೆ

Archana Udupa: ಅರ್ಚನಾ ಉಡುಪಗೆ ಕ್ಯಾನ್ಸರ್ ನಿಜಾನಾ: ಗಾಯಕಿ ಹೇಳಿದ್ದೇನು

Puneet Rajkumar: ನಟ ಪುನೀತ್ ಮಗಳಿಗೆ ವಿದೇಶದಲ್ಲಿ ಸಿಕ್ತು ಪದವಿ, ಓದಿದ್ದೇನು ಗೊತ್ತಾ

ಮುಂದಿನ ಸುದ್ದಿ
Show comments