ಪಬ್ ಕೇಸ್: ಬೇಕೆಂದೇ ದರ್ಶನ್ ರನ್ನು ಟಾರ್ಗೆಟ್ ಮಾಡಲಾಗುತ್ತಿದೆಯೇ?

Krishnaveni K
ಶನಿವಾರ, 13 ಜನವರಿ 2024 (10:12 IST)
ಬೆಂಗಳೂರು: ಕಾಟೇರ ಸಕ್ಸಸ್ ಬಳಿಕ ಬೆಂಗಳೂರಿನ ಪಬ್ ಒಂದರಲ್ಲಿ ರಾತ್ರಿಯಿಡೀ ಪಾರ್ಟಿ ಮಾಡಿದ ಆರೋಪಕ್ಕೊಳಗಾದ ಸೆಲೆಬ್ರಿಟಿಗಳು ನಿನ್ನೆ ಪೊಲೀಸ್ ವಿಚಾರಣೆಗೆ ಹಾಜರಾದರು.

ಆದರೆ ಪೊಲೀಸರ ಮುಂದೆ ದರ್ಶನ್ ಮತ್ತು ಇತರರು ನೀಡಿದ ಹೇಳಿಕೆಗೂ ಪೊಲೀಸರ ಆರೋಪಗಳಿಗೂ ಹೊಂದಿಕೆಯೇ ಆಗುತ್ತಿಲ್ಲ. ಹೀಗಾಗಿ ದರ್ಶನ್ ರನ್ನು ಬೇಕೆಂದೇ ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಅವರ ಪರ ವಕೀಲರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರು ಪಬ್ ನಲ್ಲಿ ಮದ್ಯ ಸರಬರಾಜು ನಡೆಯುತ್ತಿತ್ತು. ರಾತ್ರಿಯಿಡೀ ಪಾರ್ಟಿ ಮಾಡಲಾಗುತ್ತಿತ್ತು. ಪೊಲೀಸರು ಬಂದು ಎಚ್ಚರಿಕೆ ನೀಡಿದ್ದರು ಎಂದೆಲ್ಲಾ ವರದಿಯಲ್ಲಿ ಉಲ್ಲೇಖಿಸಿದ್ದರು.

ಆದರೆ ದರ್ಶನ್ ಮತ್ತು ಇತರೆ ನಟರು ನಿನ್ನೆ ವಿಚಾರಣೆ ವೇಳೆ ನಾವು ಮದ್ಯ ಸೇವಿಸಿರಲಿಲ್ಲ. ಊಟ ಮಾಡಲು ಹೋಗಿದ್ದೆವಷ್ಟೆ. ಅಲ್ಲಿಗೆ ಯಾವ ಪೊಲೀಸರೂ ಬಂದಿರಲಿಲ್ಲ ಎಂದಿದ್ದಾರೆ. ಹೀಗಾಗಿ ನಟರ ಹೇಳಿಕೆ ಮತ್ತು ಪೊಲೀಸರ ಆರೋಪಕ್ಕೆ ಹೊಂದಿಕೆಯೇ ಆಗುತ್ತಿಲ್ಲ.

ಹೀಗಾಗಿ ದರ್ಶನ್ ಪರ ವಕೀಲರು ಮಾಧ್ಯಮಗಳ ಮುಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗಿನ ದಿನಗಳಲ್ಲಿ ಬೇಕೆಂದೇ ದರ್ಶನ್ ರನ್ನು ಸಣ್ಣ ಪುಟ್ಟ ವಿಚಾರಕ್ಕೆಲ್ಲಾ ಎಳೆದು ತರಲಾಗುತ್ತಿದೆ. ಯಾರೋ ಅವರಿಗೆ ಆಗದವರು ಬೇಕೆಂದೇ ಈ ಕೆಲಸ ಮಾಡುತ್ತಿದ್ದಾರೆ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಮನ್ನಾ ಕಾಲಿಗೆ ಅಡ್ಡ ಬಿದ್ದು ಕ್ಷಮೆಯಾಚಿಸಲು ಸಿದ್ದ: ಹಿರಿಯ ನಟ ಅನ್ನು ಕಪೂರ್ ಹೀಗೆ ಹೇಳಿದ್ಯಾಕೆ

ಮೊನಲಿಸಾ ವಿಚಾರಣೆಗೆ ಹಾಜರಾಗಲು ಆಗುವುದಿಲ್ಲ ಎಂದ ಫರ್ಮಾನ್ ಖಾನ್, ಕಾರಣ ಏನ್ ಗೊತ್ತಾ

ಮಲಯಾಳಂ ಸೂಪರ್ ಸ್ಟಾರ್‌ ಮೋಹನ್ ಲಾಲ್‌ಗೆ ಕನ್ನಡ ಹಾಡಿನ ಮೇಲಿರುವ ಪ್ರೀತಿ ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ

ಉಪದೇಶ ನೀಡುವ ನಟ ಕಮಲ್ ಹಾಸನ್‌ಗೆ ಅನುಸರಿಸಲು ಗೊತ್ತಿಲ್ಲ ಎಂದ ನೆಟ್ಟಿಗರು, ಯಾಕೆ ಗೊತ್ತಾ, Video

ರಜನೀಕಾಂತ್ ಮತದಾನ ಮಾಡುವಾಗ ಹಿಂದೆಯೇ ನಿಂತಿದ್ದ ಜನ Video

ಮುಂದಿನ ಸುದ್ದಿ
Show comments