ಬೆಂಗಳೂರು: ಕಿಚ್ಚ ಸುದೀಪ್ ಮತ್ತು ಅವರ ಪತ್ನಿ ಪ್ರಿಯಾ ರಾಧಾಕೃಷ್ಣನ್ ವಿಚ್ಛೇದನ ಪಡೆದು ದೂರವಾಗುವ ಪ್ರಯತ್ನ ಮಾಡುತ್ತಿರಬಹುದು . ಆದರೆ ಅವರಲ್ಲಿ ಪರಸ್ಪರ ಗೌರವ, ಸ್ನೇಹ ಈಗಲೂ ಇದೆ.
ಅದಕ್ಕೆ ತಾಜಾ ಉದಾಹರಣೆ ಈ ಶುಭ ಹಾರೈಕೆ. ಇಂದು ಸುದೀಪ್ ಮತ್ತು ಉಪೇಂದ್ರ ಅಭಿನಯದ ಮುಕುಂದ ಮುರಾರಿ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಬಹುತಾರಾಗಣದ ಚಿತ್ರವಾದ್ದರಿಂದ ಸಾಕಷ್ಟು ಪ್ರಚಾರ ಪಡೆದಿದೆ.
ಸುದೀಪ್ ಗೆ ಅಭಿಮಾನಿಗಳು, ಸಹೋದ್ಯೋಗಿಗಳು ಟ್ವಿಟರ್ ನಲ್ಲಿ ವಿಶ್ ಮಾಡ್ತಿದ್ದಾರೆ. ಅವರ ನಡುವೆ ಕಿಚ್ಚ ಪ್ರಿಯಾ ಕೂಡಾ ಕಾಣಿಸಿಕೊಂಡಿದ್ದಾರೆ. “ದೇವರಿಲ್ಲದಿದ್ದರೆ ನಾಸ್ತಿಕತೆಯೂ ಇರುತ್ತಿರಲಿಲ್ಲ. ಮುಕುಂದ ಮುರಾರಿಗೆ ಶುಭವಾಗಲಿ” ಎಂದು ಕಿಚ್ಚ ಸುದೀಪ್ ಮತ್ತು ಉಪೇಂದ್ರರನ್ನು ಟ್ಯಾಗ್ ಮಾಡಿ ಪ್ರಿಯಾ ಮಾಜಿ ಪತಿಗೆ ಶುಭ ಹಾರೈಸಿದ್ದಾರೆ.
ಸಹಜವಾಗಿ ಪತ್ನಿಯ ಟ್ವೀಟ್ ಗೆ ಸ್ಪಂದಿಸಿರುವ ಸುದೀಪ್ ಶುಭ ಹಾರೈಸಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದರೂ, ಸ್ನೇಹ ಕಳೆದುಕೊಂಡಿಲ್ಲ. ಅಭಿಮಾನಿಗಳು ಇವರನ್ನು ಅಣ್ಣ-ಅತ್ತಿಗೆ ಎಂದೇ ಕರೆಯುತ್ತಾರೆ ಎನ್ನುವುದು ವಿಶೇಷ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ