Publish Date: Thu, 11 Oct 2018 (07:16 IST)
Updated Date: Thu, 11 Oct 2018 (07:17 IST)
ಬೆಂಗಳೂರು : ಬಿಗ್ ಬಜೆಟ್ ನಲ್ಲಿ ಮೂಡಿಬಂದ ‘ದಿ ವಿಲನ್’ ಚಿತ್ರದ ಬಿಡುಗಡೆಯ ಸಂಭ್ರಮದಲ್ಲಿರಬೇಕಾದ ನಿರ್ದೇಶಕ ಪ್ರೇಮ್ ಇದೀಗ ಮಲ್ಟಿಪ್ಲೆಕ್ಸ್ ಗಳಲ್ಲಿ ಕನ್ನಡ ಸಿನಿಮಾಗಳ ಹಾಗೂ ಪರಭಾಷೆಯ ಸಿನಿಮಾಗಳ ನಡುವೆ ತಾರತಮ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಲ್ಟಿಪ್ಲೆಕ್ಸ್ಗಳಲ್ಲಿ ಕನ್ನಡ ಚಿತ್ರಗಳಿಗೆ ಶೇ. 50ರಷ್ಟು ಪರ್ಸೆಂಟೇಜ್ ಹಣ ಕೊಟ್ಟರೆ, ಪರ ಭಾಷಾ ಸಿನಿಮಾಗಳಿಗೆ ಮಾತ್ರ ಶೇ. 55ರಷ್ಟು ಪರ್ಸೆಂಟೇಜ್ ಕೊಡ್ತಾರೆ. ಈಗ ದಿ ವಿಲನ್ ಚಿತ್ರಕ್ಕೂ ಶೇ. 50 ರಷ್ಟು ಮಾತ್ರ ಶೇರ್ ಕೊಡಲು ಮುಂದಾಗಿರುವ ಮಲ್ಟಿಪ್ಲೆಕ್ಸ್ಗಳ ಮಹಾಮೋಸಕ್ಕೆ ನನ್ನ ಧಿಕ್ಕಾರ ಎಂದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದಾರೆ.
ಅಲ್ಲದೇ ಈ ವಿಚಾರವಾಗಿ ಕಳೆದ ವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದರು ಏನು ಪ್ರಯೋಜನವಾಗಿಲ್ಲ. ದಯವಿಟ್ಟು ವಾಣಿಜ್ಯ ಮಂಡಳಿ ಈ ಸಮಸ್ಯೆಯನ್ನು ಬಗೆಹರಿಸಿ ಎಂದು ಆಗ್ರಹಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.