ಶಿವಣ್ಣನಿಗೆ ಮತ್ತೆ ಕೌಂಟರ್ ಕೊಟ್ಟ ಪ್ರಶಾಂತ್ ಸಂಬರಗಿ

Webdunia
ಭಾನುವಾರ, 7 ಮೇ 2023 (18:52 IST)
ಬೆಂಗಳೂರು: ಚುನಾವಣಾ ಪ್ರಚಾರಕ್ಕೆ ಕಾಂಗ್ರೆಸ್ ಪಾಳಯ ಸೇರಿಕೊಂಡಿರುವ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಗೆ ಮತ್ತೆ ಪ್ರಶಾಂತ್ ಸಂಬರಗಿ ಟಾಂಗ್ ಕೊಟ್ಟಿದ್ದಾರೆ.

ಪ್ರಶಾಂತ್ ಮೊನ್ನೆಯಷ್ಟೇ ಶಿವರಾಜ್ ಕುಮಾರ್ ಹಣಕ್ಕಾಗಿ ಪ್ರಚಾರ ಮಾಡ್ತಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದರು. ಇದಕ್ಕೆ ಕೋಪಗೊಂಡಿದ್ದ ಶಿವಣ್ಣ ನನಗೆ ಹಣದ ಅವಶ್ಯಕತೆಯಿಲ್ಲ. ಇಂತಹ ಹೇಳಿಕೆಗಳು ಅವರಿಗೆ ಶೋಭೆ ತರುವುದಿಲ್ಲ ಎಂದಿದ್ದರು.

ಆದರೆ ಇಷ್ಟಕ್ಕೇ ಸುಮ್ಮನಾಗದ ಪ್ರಶಾಂತ್ ಸಂಬರಗಿ ಮತ್ತೆ ಶಿವಣ್ಣನನ್ನು ಕೆಣಕಿದ್ದಾರೆ. ಶಿವಣ್ಣನಿಗೆ ಹತ್ತು ಪ್ರಶ್ನೆಗಳು ಎಂದು ಸೋಷಿಯಲ್ ಮೀಡಿಯಾದಲ್ಲಿ ಮತ್ತೆ ಪೋಸ್ಟ್ ಮಾಡಿದ್ದಾರೆ. ನೀವೇ ಹಿಂದೂವಾಗಿ ಭಜರಂಗಿ ಹೆಸರಿನಲ್ಲಿ ನಟಿಸಿ ಕಾಂಗ್ರೆಸ್ ನವರ ಬಜರಂಗ ದಳ ನಿಷೇಧದ ಬಗ್ಗೆ ತಮ್ಮ ನಿಲುವು ಏನು? ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ದಿ ಕೇರಳ ಸ್ಟೋರಿ ಸಿನಿಮಾ ವಿರೋಧಿಸುವ, ದಿ ಕಾಶ್ಮೀರ ಫೈಲ್ಸ್ ಸಿನಿಮಾ ವಿರೋಧಿಸಿದ್ದ ಕಾಂಗ್ರೆಸ್ ನಿಲುವಿನ ಬಗ್ಗೆ ಮೌನ ವಹಿಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ, ಡಬ್ಬಿಂಗ್ ವಿರೋಧಿಸಿ ಈಗ ಅನ್ಯ ಭಾಷೆಗಳಲ್ಲಿ ನಟಿಸುತ್ತಿರುವ ಬಗ್ಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಈಗ ಶಿವಣ್ಣ ಉತ್ತರವೇನು ಎಂದು ಕಾದು ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಬ್ರಹ್ಮಗಂಟು ಸೀರಿಯಲ್ ಖ್ಯಾತಿಯ ಗೀತಾ

ರಾಜ್ ಬಿ ಶೆಟ್ಟಿ ಹೆಸರೂ ಹೇಳದ ರಿಷಬ್ ಶೆಟ್ಟಿ: ನೆಟ್ಟಿಗರದ್ದು ಒಂದೇ ಪ್ರಶ್ನೆ

ಮದುವೆ ಬಳಿಕ ಮೊದಲ ಬಾರೀ ಒಟ್ಟಿಗೆ ಕಾಣಿಸಿಕೊಂಡ ಸಮಂತಾ- ರಾಜ್‌ ನಿಡಿಮೋರು

ಕೇರಳ ರಾಜ್ಯ ಪ್ರಶಸ್ತಿ ಪುರಸ್ಕೃತ ಮಲಯಾಳಂ ನಟ ಅಖಿಲ್ ವಿಶ್ವನಾಥ್ ಅನುಮಾನಾಸ್ಪದ ಸಾವು

ದರ್ಶನ್ ಅಭಿನಯದ ಡೆವಿಲ್ ಸಿನಿಮಾ ಮೊದಲ ದಿನವೇ 30 ಕೋಟಿ ಗಳಿಸಿದ್ದು ನಿಜಾನಾ

ಮುಂದಿನ ಸುದ್ದಿ
Show comments