Publish Date: Tue, 22 Dec 2020 (09:12 IST)
Updated Date: Tue, 22 Dec 2020 (09:40 IST)
ಚೆನ್ನೈ : ನಿರ್ದೇಶಕ ವೆಟ್ರಿಮಾರನ್ ಅವರು ಭಾರತೀಯ ಚಿತ್ರರಂಗದಲ್ಲಿ ಜನರ ಮೆಚ್ಚುಗೆ ಪಡೆದ ಒಬ್ಬ ಖ್ಯಾತ ನಿರ್ದೇಶಕ. ಕಳೆದ ವರ್ಷ ಬಿಡುಗಡೆಯಾದ ಅವರ ಅಸುರನ್ ಚಿತ್ರ ಅಂತರಾಷ್ಟ್ರೀಯ ಮನ್ನಣೆಗೆ ಪಾತ್ರವಾಗಿದೆ. ಇಂತಹ ಮಹಾನ್ ನಿರ್ದೇಶಕನನ್ನು ನಟ ಪ್ರಕಾಶ್ ರಾಜ್ ಅವರು ಶಪಿಸಿದ್ದಾರೆ.
ಹೌದು. ಇತ್ತೀಚೆಗೆ ಬಿಡುಗಡೆಯಾದ ಆಂಥಾಲಜಿ ಆಫ್ ಸಿನ್ ಸ್ಟೋರಿಸ್ ನಲ್ಲಿ ಅವರು ನಿರ್ದೇಶಿಸಿದ ಭಾಗ ಒನ್ ನೈಟ್ ತುಂಬಾ ದುಃಖಕರವಾದ ಕಥೆಯಾಗಿತ್ತು. ಈ ವೇಳೆ ಈ ಚಿತ್ರದ ಬಗ್ಗೆ ಮಾತನಾಡಿದ ಪ್ರಕಾಶ್ ರಾಜ್ ಅವರು , ವೆಟ್ರಿಮಾರನ್ ಅವರನ್ನು ಶಪಿಸುವುದಾಗಿ ಹಾಗೂ ಮುಂದಿನ ಜನ್ಮದಲ್ಲಿ ಅವರು ಮೆಣಸಿನಕಾಯಿಯಲ್ಲಿ ಬಿದ್ದ ಹಲ್ಲಿಯಾಗಿ ಜನಿಸಲಿ ಎಂದು ಹೇಳಿದ್ದಾರೆ.
ಯಾಕೆಂದರೆ ಈ ಚಿತ್ರದಲ್ಲಿ ತನ್ನ ಪಾತ್ರದ ಬಗ್ಗೆ ಯೋಚಿಸಿ ರಾತ್ರಿ ಅರ್ಧಗಂಟೆ ಅಳುವ ಹಾಗೇ ಮಾಡಿದ್ದಕ್ಕಾಗಿ ಎಂದು ತಮಾಷೆ ಮಾಡಿದ್ದಾರೆ. ಹಾಗೇ ಅವರ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ ಎನ್ನಲಾಗಿದೆ.