Select Your Language

Notifications

webdunia
webdunia
webdunia
webdunia

ಪ್ರಾಜೆಕ್ಟ್ ಕೆ ತಡವಾಗಲು ಕಾರಣವಾಗುತ್ತಿದ್ದಾರಾ ಪ್ರಭಾಸ್?

ಪ್ರಾಜೆಕ್ಟ್ ಕೆ ತಡವಾಗಲು ಕಾರಣವಾಗುತ್ತಿದ್ದಾರಾ ಪ್ರಭಾಸ್?
ಹೈದರಾಬಾದ್ , ಭಾನುವಾರ, 21 ಆಗಸ್ಟ್ 2022 (11:00 IST)
ಹೈದರಾಬಾದ್: ಬಾಹುಬಲಿ ಬಳಿಕ ಪ್ರಭಾಸ್ ನಟನೆಯ ಎರಡು ಸಿನಿಮಾಗಳು ಬಿಡುಗಡೆಯಾದರೂ ಹೇಳಿಕೊಳ‍್ಳುವಂತಹ  ಯಶಸ್ಸು ಸಿಕ್ಕಿಲ್ಲ. ಹೀಗಾಗಿ ಪ್ರಭಾಸ್ ತಮ್ಮ ಮುಂದಿನ ಚಿತ್ರದ ಬಗ್ಗೆ ಕೇರ್ ಫುಲ್ ಆಗಿದ್ದಾರೆ.

ಪ್ರಭಾಸ್ ಕೈಯಲ್ಲಿ ಈಗ ಸಲಾರ್ ಮತ್ತು ಪ್ರಾಜೆಕ್ಟ್ ಹಾಗೂ ಆದಿ ಪುರುಷ್ ಸಿನಿಮಾಗಳಿವೆ. ಆದಿಪುರುಷ್ ಇನ್ನೂ ಪ್ರಿ ಪ್ರೊಡಕ್ಷನ್ ಹಂತದಲ್ಲಿದೆ. ಆದರೆ ಸಲಾರ್ ಮತ್ತು ಪ್ರಾಜೆಕ್ಟ್ ಕೆ ಚಿತ್ರೀಕರಣ ನಡೆಯುತ್ತಿದೆ.

ಆದರೆ ಬಾಲಿವುಡ್ ಸದ್ಯಕ್ಕೆ ಬಾಯ್ಕಾಟ್ ಟ್ರೆಂಡ್ ನ ಭೀತಿಯಲ್ಲಿದ್ದು, ಈಗ ಹಿಂದಿಯಲ್ಲಿ ಯಾವುದೇ ಸಿನಿಮಾ ರಿಲೀಸ್ ಆದರೂ ಫ್ಲಾಪ್ ಗ್ಯಾರಂಟಿ ಎನ್ನುವ ಸ್ಥಿತಿಯಿದೆ. ಪ್ರಾಜೆಕ್ಟ್ ಕೆ ಸಿನಿಮಾ ಬಹುಭಾಷೆಗಳಲ್ಲಿ ಬಿಡುಗಡೆಯಾಗುತ್ತಿದ್ದು, ದೀಪಿಕಾ ಪಡುಕೋಣೆ, ಅಮಿತಾಭ್ ಬಚ್ಚನ್ ಸೇರಿದಂತೆ ಬಾಲಿವುಡ್ ಘಟಾನುಘಟಿಗಳಿದ್ದಾರೆ. ಹೀಗಾಗಿ ಆತುರದಲ್ಲಿ ಈ ಸಿನಿಮಾ ಬಿಡುಗಡೆ ಮಾಡಿದರೆ ಸೋಲಾಗಬಹುದು ಎಂಬ ಕಾರಣಕ್ಕೆ ಪ್ರಭಾಸ್ ಪ್ರಾಜೆಕ್ಟ್ ಕೆ ಸಿನಿಮಾವನ್ನು ನಿಧಾನ ಮಾಡುತ್ತಿದ್ದಾರಂತೆ. ಮೂಲಗಳ ಪ್ರಕಾರ ಈ ಸಿನಿಮಾ ಬಿಡುಗಡೆ ಮುಂದಿನ ವರ್ಷವಾಗಬಹುದು ಎನ್ನಲಾಗುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ವೈವಾಹಿಕ ಜೀವನಕ್ಕೆ ಕಾಲಿಡಲಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್