Publish Date: Tue, 02 Mar 2021 (09:37 IST)
Updated Date: Tue, 02 Mar 2021 (09:38 IST)
ಹೈದರಾಬಾದ್ : ಟಾಲಿವುಡ್ ಖ್ಯಾತ ನಟ ಪ್ರಭಾಸ್ ಅವರು ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.ಇದೀಗ ಈ ಚಿತ್ರದ ಬಿಡುಗಡೆಯ ದಿನಾಂಕವನ್ನು ಪ್ರಕಟಿಸಲಾಗಿದೆ.
ಪ್ರಭಾಸ್ ಅಭಿಮಾನಿಗಳು ಮತ್ತು ಸಿನಿ ಪ್ರೀಯರು ನೋಡಲು ಕಾತುರದಿಂದ ಕಾಯುತ್ತಿದ್ದ ಪ್ರಭಾಸ್ ಅಭಿನಯದ ಸಲಾರ್ ಚಿತ್ರ 14 ಏಪ್ರಿಲ್ 2022ರಂದು ರಿಲೀಸ್ ಆಗಲಿದೆ ಎಂಬುದಾಗಿ ತಿಳಿದುಬಂದಿದೆ. ನಟ ಪ್ರಭಾಸ್ ಅವರು ತಮ್ಮ ಇನ್ ಸ್ಟಾಗ್ರಾಂ ಪೇಜ್ ನಲ್ಲಿ ಈ ವಿಚಾರವನ್ನು ಪೋಸ್ಟ್ ಮಾಡಿದ್ದಾರೆ. ಈ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿ ನಟಿಸಿದ್ದಾರೆ. ಇದನ್ನು ನಿರ್ಮಾಪಕ ವಿಜಯ್ ಕಿರಗಂಡೂರ್ ನಿರ್ಮಿಸುತ್ತಿದ್ದಾರೆ.