ನನ್ನ ಜೀವನಕ್ಕೆ ವಿಶೇಷ ವ್ಯಕ್ತಿ ಆಗಮನವಾಗುತ್ತಿದೆ ಎಂಬ ಪ್ರಭಾಸ್ ಮೆಸೇಜ್ ವೈರಲ್

Krishnaveni K
ಶುಕ್ರವಾರ, 17 ಮೇ 2024 (13:41 IST)
Photo Courtesy: Instagram
ಹೈದರಾಬಾದ್: ಟಾಲಿವುಡ್ ನಟ ಪ್ರಭಾಸ್ ಮದುವೆ ಯಾವಾಗ ಎಂದು ಅಭಿಮಾನಿಗಳು ಬಹಳ ಸಮಯದಿಂದ ಪ್ರಶ್ನೆ ಮಾಡುತ್ತಲೇ ಇದ್ದಾರೆ. ಆದರೆ ಇದೀಗ ಪ್ರಭಾಸ್ ಮಾಡಿರುವ ಪೋಸ್ಟ್ ಒಂದು ಎಲ್ಲರ ಗಮನ ಸೆಳೆಯುತ್ತಿದೆ.

ತಮ್ಮ ಸೋಷಿಯಲ್ ಮೀಡಿಯಾ ಪುಟದಲ್ಲಿ ಪ್ರಭಾಸ್ ‘ಡಾರ್ಲಿಂಗ್ಸ್, ಕೊನೆಗೂ ವಿಶೇಷ ವ್ಯಕ್ತಿ ನನ್ನ ಜೀವನಕ್ಕೆ ಪ್ರವೇಶಿಸುತ್ತಿದ್ದಾರೆ. ಕೆಲವೇ ದಿನ ಕಾಯಿರಿ’ ಎಂದು ಸಂದೇಶ ಬರೆದಿದ್ದಾರೆ. ಪ್ರಭಾಸ್ ಇಂತಹದ್ದೊಂದು ಸಂದೇಶ ಬರೆಯುತ್ತಿದ್ದಂತೇ ಅಭಿಮಾನಿಗಳಲ್ಲಿ ಹಲ್ ಚಲ್ ಶುರುವಾಗಿದೆ.

ಪ್ರಭಾಸ್ ಮದುವೆ ಬಗ್ಗೆಯೇ ಹೇಳುತ್ತಿರಬಹುದು ಎಂದು ಊಹಿಸಿದ್ದಾರೆ. ವಿಶೇಷ ವ್ಯಕ್ತಿ ಎಂದು ಪ್ರಭಾಸ್ ಉಲ್ಲೇಖಿಸಿರುವುದು ಯಾರ ಬಗ್ಗೆ ಇರಬಹುದು ಎಂದು ನೆಟ್ಟಿಗರು ಚರ್ಚೆ ಆರಂಭಿಸಿದ್ದಾರೆ. ಪ್ರಭಾಸ್ ಮದುವೆ ಬಗ್ಗೆ ಹೇಳಿರಬಹುದು ಎಂದು ಕೆಲವರು ಹೇಳಿದರೆ ಮತ್ತೆ ಕೆಲವರು ಹೊಸ ಸಿನಿಮಾ ಬಗ್ಗೆ ಈ ರೀತಿ ಹೈಪ್ ಕ್ರಿಯೇಟ್ ಮಾಡಿರಬಹುದು ಎನ್ನುತ್ತಿದ್ದಾರೆ.

ಅದೇನೇ ಇರಲಿ, ಪ್ರಭಾಸ್ ಮದುವೆ ಬಗ್ಗೆ ಹಲವು ಸಮಯದಿಂದ ಗಾಸಿಪ್ ಗಳು ಕೇಳಿಬರುತ್ತಲೇ ಇದ್ದವು. ಪ್ರಭಾಸ್ ಹೆಸರು ಅನುಷ್ಕಾ ಶೆಟ್ಟಿ ಜೊತೆ, ಕೃತಿ ಸನನ್ ಜೊತೆಗೂ ಥಳುಕು ಹಾಕಿಕೊಂಡಿತ್ತು. ಆದರೆ ಇದೆಲ್ಲವೂ ಸುಳ್ಳಾಯಿತು. ಈಗ ಪ್ರಭಾಸ್ ಜೀವನಕ್ಕೆ ಎಂಟ್ರಿ ಕೊಟ್ಟಿರುವ ಹೊಸಬರು ಯಾರು ಎಂಬ ಕುತೂಹಲ ಎಲ್ಲರಲ್ಲಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Kantara chapter 1: ಮೈ ರೋಮಾಂಚನಗೊಳಿಸುವ ಕಾಂತಾರ ಚಾಪ್ಟರ್ 1 ವಿಮರ್ಶೆ ಇಲ್ಲಿದೆ

BB Season 12: ಮೂರನೇ ದಿನ ಧನುಷ್ ವಿರುದ್ಧ ರೆಬಲ್ ಆದ ಅಶ್ವಿನಿ ಗೌಡಗೆ ನೆಟ್ಟಿಗರಿಂದ ಕ್ಲಾಸ್‌

ಎರಡನೇ ಮಗುವಿನ ನಿರೀಕ್ಷೆಯಲ್ಲಿ ಬಾಲಿವುಡ್ ನಟಿ ಸೋನಂ ಕಪೂರ್

ತೆಲುಗು ನಟಿ ಡಿಂಪಲ್ ಹಯಾತಿ ವಿರುದ್ಧ ಠಾಣೆ ಮೆಟ್ಟಿಲೇರಿದ ಮನೆಕೆಲಸದಾಕೆ

ಕಾಂತಾರ ಚಾಪ್ಟರ್ 1 ಮೂವಿ ಇಂದಿನಿಂದಲೇ ಶುರು

ಮುಂದಿನ ಸುದ್ದಿ
Show comments