Select Your Language

Notifications

webdunia
webdunia
webdunia
webdunia

ಬಾಹುಬಲಿ-2 ರಿಲೀಸ್ ದಿನವೇ ಬಂತು ಪ್ರಭಾಸ್ ಮುಂದಿನ ಚಿತ್ರ 150 ಕೋಟಿ ಬಜೆಟ್`ನ ಸಾಹೋ ಟೀಸರ್

ಬಾಹುಬಲಿ-2 ರಿಲೀಸ್ ದಿನವೇ ಬಂತು ಪ್ರಭಾಸ್ ಮುಂದಿನ ಚಿತ್ರ 150 ಕೋಟಿ ಬಜೆಟ್`ನ ಸಾಹೋ ಟೀಸರ್
ಹೈದ್ರಾಬಾದ್ , ಶುಕ್ರವಾರ, 28 ಏಪ್ರಿಲ್ 2017 (18:16 IST)
ಬಾಹುಬಲಿ-2 ಬಳಿಕ ಪ್ರಭಾಸ್ ಯಾವ ಚಿತ್ರಕ್ಕೆ ಕಾಣಿಸಿಕೊಳ್ಳುತ್ತಾರೆ ಎಂಬ ಪ್ರಶ್ನೆಗೆ ಬಾಹುಬಲಿ-2 ರಿಲೀಸ್ ದಿನವೇ ಉತ್ತರ ಸಿಕ್ಕಿದೆ. 150 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಸಾಹೋ ಚಿತ್ರದ ಟೀಸರ್ ಬಿಡುಗಡೆ ಮಾಡಲಾಗಿದೆ.

ಯುವಿ ಕ್ರಿಯೇಶನ್ಸ್ ಅವರ ಈ ಚಿತ್ರವನ್ನ ತೆಲುಗು, ತಮಿಳು ಮತ್ತು ಹಿಂದಿ ಭಾಷೆಯಲ್ಲಿ ನಿರ್ಮಿಸಲಾಗುತ್ತಿದೆ. ಸುಜೇತ್ ಈ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಒಂದೆಡೆ ಐತಿಹಾಸಿಕ ಮಹೋನ್ನತ ಚಿತ್ರದ ರಾಜನ ಪಾತ್ರ ಮತ್ತೊಂದೆಡೆ ಪಕ್ಕಾ ಸಾಮಾಜಿಕ ಕಥಾಧರಿತ ಆಕ್ಷನ್ ಹೀರೋ ಅವತಾರದಲ್ಲಿ ಪ್ರಭಾಸ್ ಅವರನ್ನ ಅಭಿಮಾನಿಗಳು ಕಣ್ತುಂಬಿಕೊಂಡಿದ್ದಾರೆ.

ಬಾಹುಬಲಿ ಚಿತ್ರಕ್ಕಾಗಿ 5 ವರ್ಷ ಕಾಲ್ ಶೀಟ್ ಕೊಟ್ಟಿದ್ದ ಪ್ರಭಾಸ್ ಸತತ 5 ವರ್ಷದಿಂದ ರಾಜಮೌಳಿ ಗರಡಿಯಲ್ಲೇ ಇದ್ದರು. ಈ ಚಿತ್ರ ಪ್ರಭಾಸ್ ಖ್ಯಾತಿಯನ್ನ ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ. ಹೀಗಾಗಿ, ಕರಣ್ ಜೋಹರ್ ಮತ್ತೊಂದು ಪೌರಾಣಿಕ ಚಿತ್ರದ ಮೂಲಕ ಪ್ರಭಾಸ್ ಅವರನ್ನ ಬಾಲಿವುಡ್ ಎಂಟ್ರಿಗೆ ಸಿದ್ಧತೆ ನಡೆಸಿದ್ದಾರೆಂಬ ಮಾತುಕತೆ ಕೇಳಿಬರುತ್ತಿದೆ. ಇದೆಲ್ಲದರ ಜೊತೆ ವಯಸ್ಸು 38 ಆದರೂ ಬ್ಯಾಚುಲರ್ ಆಗಿರುವ ಪ್ರಭಾಸ್ ಸದ್ಯದಲ್ಲೇ ವಿವಾಹ ಬಂಧನಕ್ಕೊಳಗಾಗಲಿದ್ದಾರೆ ಎಂಬ ಮಾತುಗಳೂ ಇವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ


Share this Story:

Follow Webdunia kannada

ಮುಂದಿನ ಸುದ್ದಿ

ನಟಿ ಕಮ್ ಮಾಡೆಲ್ ಪ್ರೀತಿ ಜೈನ್`ಗೆ 3 ವರ್ಷ ಜೈಲು