ಕೋಲಿವುಡ್ ಶೃಂಗಾರ ತಾರೆ ಬಾಬಿಲೋನ ದಾಂಪತ್ಯ ಜೀವನ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಪಿರಂದಾಚ್ಚು ಅನ್ನೋ ಸಿನಿಮಾ ಮೂಲಕ ಬಣ್ಣದ ಜಗತ್ತಿಗೆ ಅಡಿಯಿಟ್ಟ ಈಕೆ ಜಿಮ್ ಒಂದರಲ್ಲಿ ಪರಿಚಯವಾದ ಸುಂದರ್ ಪಾಲ್ ರಾಜ್ ಅನ್ನೋರ ಕೈಹಿಡಿದಿದ್ದಾರೆ.
ಆದರೆ ಮದುವೆ ಬಗ್ಗೆ ಅವರ ಅಜ್ಜಿ ಕೃಷ್ಣಕುಮಾರಿ ಗರಂ ಆಗಿದ್ದು, ಸುಂದರ್ ಪಾಲ್ ರಾಜ್ ಒಬ್ಬ ಮಾಂತ್ರಿಕ. ಏನೋ ಮೋಡಿ ಮಾಡಿ ನನ್ನ ಮೊಮ್ಮಗಳನ್ನು ಬುಟ್ಟಿಗೆ ಹಾಕ್ಕೊಂಡಿದ್ದಾನೆ. ಅವನ ಮಾಯದ ಮಾತಿಗೆ ಅವರು ಮರುಳಾಗಿದ್ದಾಳೆ ಎಂದು ಸಾಲಿಗ್ರಾಮಂ ಪೊಲೀಸ್ ಠಾಣೆಗೆ ದೂರಿದ್ದಾರೆ.
ಈವತ್ತು ಅವರು ಇಷ್ಟೆತ್ತರ ಬೆಳೆದಿದ್ದಾರೆ ಅಂದರೆ ಅದಕ್ಕೇ ನಾನೇ ಕಾರಣ. ಅವಳನ್ನ ಇಷ್ಟು ಎತ್ತರಕ್ಕೆ ಬೆಳೆಸಿರುವುದರ ಹಿಂದೆ ಸಾಕಷ್ಟು ಕೃಷಿ ಮಾಡಿದ್ದೇನೆ ಎಂದು ಬಾಬಿಲೋನ ಅಜ್ಜಿ ಹೇಳಿಕೊಂಡಿದ್ದಾರೆ. ಪಾಲ್ ರಾಜ್ ವಶೀಕರಣ ಮಾಡಿ ಮೊಮ್ಮಗಳನ್ನು ವಶಪಡಿಸಿಕೊಂಡಿದ್ದಾನೆ ಎಂದು ಆರೋಪಿಸಿದ್ದಾರೆ.
ಆದರೆ ಬಾಲಿಲೋನ ಮಾತ್ರ ನಾವಿಬ್ಬರೂ ಇಷ್ಟಪಟ್ಟೇ ಮದುವೆ ಆಗಿದ್ದೀವಿ. ನಮ್ಮ ಅಜ್ಜಿ ಕೊಟ್ಟ ದೂರನ್ನು ಪರಿಗಣಿಸಬೇಡಿ. ಅದನ್ನು ರದ್ದು ಮಾಡಿ ಎಂದು ಪೊಲೀಸರನ್ನು ಕೋರಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.