ಪರಪ್ಪನ ಅಗ್ರಹಾರ ಜೈಲಿನಲ್ಲಿ ಪವಿತ್ರಾ ಗೌಡ, ದರ್ಶನ್ ಗೆ ಎದುರಾಗಿದೆ ಒಂದೇ ಪ್ರಾಬ್ಲಂ

Krishnaveni K
ಬುಧವಾರ, 7 ಜನವರಿ 2026 (10:38 IST)
ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಎ1 ಆರೋಪಿ ಪವಿತ್ರಾ ಗೌಡ ಮತ್ತು ಎ2 ಆರೋಪಿ ದರ್ಶನ್ ತೂಗುದೀಪ ಅವರಿಗೆ ಒಂದೇ ಸಮಸ್ಯೆ ಎದುರಾಗಿದೆ.

ಎ1 ಆರೋಪಿ ಪವಿತ್ರಾ ಗೌಡಗೆ ನ್ಯಾಯಾಲಯ ದಿನಕ್ಕೆ ಒಂದು ಹೊತ್ತು ಮನೆ ಊಟ ಕೊಡಲು ಅವಕಾಶ ನೀಡಿತ್ತು. ಆದರೆ ಜೈಲು ಅಧಿಕಾರಿಗಳು ಬೇರೆಯವರೂ ಇದನ್ನೇ ಕೇಳುತ್ತಾರೆ ಎಂದು ಅವಕಾಶ ನೀಡಿಲ್ಲ. ಹೀಗಾಗಿ ದೇವರು ಕೊಟ್ಟರೂ ಪೂಜಾರಿ ಕೊಡಲಿಲ್ಲ ಎನ್ನುವ ಸ್ಥಿತಿ ಪವಿತ್ರಾ ಗೌಡರದ್ದು ಆಗಿತ್ತು.

ಇದೀಗ ಪವಿತ್ರಾ ಗೌಡರದ್ದೇ ಸಮಸ್ಯೆ ಗೆ ದರ್ಶನ್ ಗೂ ಎದುರಾಗಿದೆ. ನಟ ದರ್ಶನ್ ಗೆ ಬ್ಲಾಂಕೆಟ್ ನೀಡಲು ಕೋರ್ಟ್ ಏನೋ ಅನುಮತಿ ನೀಡಿತ್ತು. ಆದರೆ ಜೈಲು ಅಧಿಕಾರಿಗಳು ಈ ಅವಕಾಶ ನೀಡಿಲ್ಲ. ಹೊಸದಾಗಿ ಕಾರಾಗೃಹ ಮತ್ತು ಸುಧಾರಣಾ ಸೇವೆಗಳ ಡಿಜಿಪಿಯಾಗಿ ಬಂದಿರುವ ಅಲೋಕ್ ಕುಮಾರ್ ಕೆಲವು ಖಡಕ್ ನಿಯಮಗಳನ್ನು ಹಾಕಿದ್ದಾರೆ.

ಅದರಂತೆ ಜೈಲಿನ ನಿಯಮದ ಪ್ರಕಾರ ಎಲ್ಲಾ ಕೈದಿಗಳಿಗೂ ಒಂದೇ ರೀತಿಯ ಬ್ಲಾಂಕೆಟ್ ನೀಡಬೇಕು ಎಂದು ನಿಯಮ ಮಾಡಿದ್ದಾರೆ. ಇದರಿಂದಾಗಿ ವಿಐಪಿ, ಸಾಮಾನ್ಯ ಕೈದಿಗಳು ಎನ್ನದೇ ಎಲ್ಲರಿಗೂ ಒಂದೇ ರೀತಿಯ ಬ್ಲಾಂಕೆಟ್ ನೀಡಬೇಕಾಗುತ್ತದೆ. ಹೀಗಾಗಿ ವಿಶೇಷ ಸೌಲಭ್ಯಗಳಿಗೆ ಅವಕಾಶವಿರಲ್ಲ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ದೂರಿದವರ ಬಾಯಲ್ಲೇ ಹೊಗಳಿಕೆ, ಕಿಚ್ಚನ ಚಪ್ಪಾಳೆಗೆ ಮನೆ ಮಂದಿ ಶಾಕ್‌

ಟಾಕ್ಸಿಕ್‌ ಸಿನಿಮಾ ಕೈಬಿಡಲು ಕೊನೆಗೂ ಕಾರಣ ಬಿಚ್ಚಿಟ್ಟ ನಟ ಗುಲ್ಶನ್ ದೇವಯ್ಯ

ಟಾಕ್ಸಿಕ್ ಸಿನಿಮಾದ ಕ್ಯಾರೆಕ್ಟರ್ ಹೆಸರಿಗೂ ಯಶ್ ಗೂ ಇದೇ ಸ್ಪೆಷಲ್ ನಂಟು

ಟಾಕ್ಸಿಕ್‌ ಸಿನಿಮಾದಲ್ಲಿ ಹಸಿಬಿಸಿ ದೃಶ್ಯದಲ್ಲಿ ಯಶ್‌, ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್‌

ಆಸ್ಕರ್ ರೇಸ್ ನಲ್ಲಿ ಕಾಂತಾರ ಚಾಪ್ಟರ್ 1: ಕನ್ನಡಕ್ಕೆ ಹೆಮ್ಮೆಯ ಕ್ಷಣ

ಮುಂದಿನ ಸುದ್ದಿ
Show comments