ಕನ್ನಡ ನಟಿಮಣಿಯರ ರಕ್ಷಣೆಗೆ ಸಿದ್ಧವಾಗುತ್ತಿದೆ ಪಾಶ್ ಸಮಿತಿ, ಇಲ್ಲಿದೆ ವಿವರ

Sampriya
ಸೋಮವಾರ, 16 ಸೆಪ್ಟಂಬರ್ 2024 (16:52 IST)
Photo Courtesy X
ಮಲಯಾಳ ಸಿನಿಮಾರಂಗದಲ್ಲಿ ಸದ್ದು ಮಾಡುತ್ತಿರುವ ಹೇಮಾ ಸಮಿತಿ ವರದಿ ಬೆನ್ನಲ್ಲೇ ಇದೀಗ ಕನ್ನಡ ಚಿತ್ರರಂಗದಲ್ಲೂ ಅಂತಹ ಸಮಿತಿಗೆ ಅಗ್ರಹ ಕೇಳಿಬಂದಿದೆ. ಈ ಹಿನ್ನೆಲೆ ಇಂದು ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ನೇತೃತ್ವದಲ್ಲಿ ಸಭೆ ನಡೆಯಿತು. ಅದರಲ್ಲಿ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಅವರು ಪಾಲ್ಗೊಂಡಿದ್ದರು.

ಹೇಮಾ ಸಮಿತಿ ವರದಿಯಿಂದ ಮಲಯಾಳಂ ಚಿತ್ರರಂಗದಲ್ಲಿ ಹೊಸ ಸಂಚಲವನ್ನು ಸೃಷ್ಟಿಯಾಗಿದೆ. ಇದರಿಂದ ಅನೇಕ ಲೈಂಗಿಕ ದೌರ್ಜನ್ಯ ದೂರುಗಳು ಹೊರಬಿದ್ದಿದ್ದು, ಸ್ಟಾರ್ ಡೈರೆಕ್ಟರ್ ಹಾಗೂ ನಟರ ವಿರುದ್ಧ ಆರೋಪಗಳು ಕೇಳಿಬರುತ್ತಿದೆ.

ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಮಾತನಾಡಿ, ಮಹಿಳೆಯ ಸಮಸ್ಯೆ ಮತ್ತು ರಕ್ಷಣೆಗಾಗಿ ಕನ್ನಡ ಚಿತ್ರರಂಗದಲ್ಲಿ ಪಾಶ್ ಕಮಿಟಿ ಮಾಡಲಾಗುತ್ತಿದೆ.  ಕಾನೂನಿ ಅಡಿಯಲ್ಲಿ ಕಮಿಟಿ ಇರಲಿದೆ. ಅದೇ ರೀತಿಯಲ್ಲಿ ಸಮಿತಿ ರಚನೆಯಾಗಲಿದೆ.  ನಟಿಯರು ಸಿನಿಮಾದಲ್ಲಿ ನಟಿಸಬೇಕು ಎಂದಾಗ 17 ಪಾಯಿಂಟ್ಸ್​ ಇದೆ. ಯಾವ ಯಾವ ಫೆಸೆಲಿಟಿ ನೀಡಬೇಕು ಎಂಬುದರ ಉಲ್ಲೇಖ ಇದೆ. ಪಾಶ್ ಕಮಿಟಿ ಇರುತ್ತದೆ. ಸರ್ಕಾರದ ಗೆಜೆಟ್​ನಲ್ಲಿ ಈ ಸಮಿತಿ ಬರುತ್ತದೆ. ದೂರು ಬಂದರೆ ತನಿಖೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಮಹಿಳೆಯರ ರಕ್ಷಣೆಗಾಗಿ ಸಮಿತಿ ರಚನೆಯಾಗಲೇ ಬೇಕು. ಅದನ್ನು ಯಾರು ಬೇಡ ಎಂದು ಹೇಳಲು ಆಗುವುದಿಲ್ಲ. ಈ ಸಮಿತಿಯ ಅಧ್ಯಕ್ಷೆ ಹಿರಿಯ ನಟಿಯಾಗಿರುತ್ತಾರೆ. ಅರ್ಧದಷ್ಟು ಸದಸ್ಯರು ಮಹಿಳೆಯರಾಗಬೇಕು. ಮಹಿಳೆಯರ ಪರ ಹೋರಾಡುವ ಒಬ್ಬರು ಈ ಸಮಿತಿಯಲ್ಲಿ ಇರಬೇಕು ಎಂದು ಮಾಹಿತಿ ನೀಡಿದರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ನಟ ದರ್ಶನ್ ಜೈಲು ಸೇರಿ ಶತದಿನೋತ್ಸವ, ಹೇಗಿದೆ ದಾಸನ ಜೈಲು ವಾಸ

ರಶ್ಮಿಕಾ ಮಂದಣ್ಣ ಮನೋಜ್ಞ ಅಭಿನಯದ ದಿ ಗರ್ಲ್​ಫ್ರೆಂಡ್ ಸಿನಿಮಾ ಒಟಿಟಿ ಬರಲು ಸಜ್ಜು

ನಟ ಮಂಜು ಮನೋಜ್ ಶುರು ಮಾಡಿರುವ ಹೊಸ ಬಿಸಿನೆಸ್ ಏನ್ ಗೊತ್ತಾ

ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ: ಸುಮಲತಾ ಭಾವುಕಾ ಪೋಸ್ಟ್

ನಟ ಧರ್ಮೇಂದ್ರ ನಿಧನಕ್ಕೆ ರಾಷ್ಟ್ರಪತಿ, ಪ್ರಧಾನಿ ಸಂತಾಪ

ಮುಂದಿನ ಸುದ್ದಿ