Select Your Language

Notifications

webdunia
webdunia
webdunia
Tuesday, 4 March 2025
webdunia

ರಾಜಕುಮಾರ್ ಮತ್ತು ಪಾರ್ವತಮ್ಮನವರ ಕೊನೆಯಾಸೆ ಈಡೇರಲಿಲ್ಲವಾ..?

ರಾಜಕುಮಾರ್ ಮತ್ತು ಪಾರ್ವತಮ್ಮನವರ ಕೊನೆಯಾಸೆ ಈಡೇರಲಿಲ್ಲವಾ..?
ಬೆಂಗಳೂರು , ಶುಕ್ರವಾರ, 2 ಜೂನ್ 2017 (13:12 IST)
ನಟ ಸಾರ್ವಭೌಮ ರಾಜಕುಮಾರ್ ಕುಟುಂಬದ ಕಣ್ಣಾಗಿದ್ದ ಪಾರ್ವತಮ್ಮ ರಾಜಕುಮಾರ್ ಅನಾರೋಗ್ಯದಿಂದ ಇತ್ತೀಚೆಗೆ ನಿಧನರಾದ ಸಂಗತಿ ನಿಮಗೆಲ್ಲ ಗೊತ್ತೇ ಇದೆ. 75 ಸಿನಿಮಾ ನಿರ್ಮಿಸಿರುವ ಪಾರ್ವತಮ್ಮನವರ ಕೊನೆಯ ಆಸೆ ಈಡೇರಿಲ್ಲವಂತೆ.
 

ಹೌದು, ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಅವರಿಗೆ ಮೂವರೂ ಗಂಡು ಮಕ್ಕಳನ್ನ ಒಂದೇ ಚಿತ್ರದಲ್ಲಿ ನೋಡುವ ಆಸೆ ಇತ್ತಂತೆ. ಪೌರಾಣಿಕ ಚಿತ್ರದಲ್ಲಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಮತ್ತು ಪುನೀತ್ ಪೌರಾಣಿಕ ಚಿತ್ರವೊಂದರಲ್ಲಿ ಕಾಣಿಸಿಕೊಳ್ಳಬೇಕೆಂಬುದು ಅವರ ಆಸೆಯಾಗಿತ್ತೆಂದು ಹಿರಿಯ ನಟ ಶ್ರೀನಿವಾಸಮೂರ್ತಿ ಹೇಳಿದ್ಧಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ರಾಜಕುಮಾರ್ ಅವರು ಮೂವರೂ ಮಕ್ಕಳನ್ನ ಒಳಗೊಂಡ ಪೌರಾಣಿಕ ಚಿತ್ರ ನಿರ್ದೇಶಿಸುವಂತೆ ಶ್ರೀನಿವಾಸಮೂರ್ತಿಗೆ ಸೂಚಿಸಿದ್ದರಂತೆ. ಆದರೆ, ಹಲವು ಕಾರಣಗಳಿಂದ ಅವರ ಆಸೆ ಈಡೇರಿಲ್ಲವೆಂದು ಶ್ರೀನಿವಾಸ ಮೂರ್ತಿ ಹೇಳಿದ್ದಾರೆ. 


Share this Story:

Follow Webdunia kannada

ಮುಂದಿನ ಸುದ್ದಿ

ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾದ ಸನ್ನಿ ಲಿಯೋನ್