Select Your Language

Notifications

webdunia
webdunia
webdunia
webdunia

ಇನ್ನೆರೆಡು ದಿನಗಳಲ್ಲಿ ಪಾರ್ವತಮ್ಮ ರಾಜಕುಮಾರ್ ಡಿಸ್ಚಾರ್ಜ್

ಇನ್ನೆರೆಡು ದಿನಗಳಲ್ಲಿ ಪಾರ್ವತಮ್ಮ ರಾಜಕುಮಾರ್ ಡಿಸ್ಚಾರ್ಜ್
ಬೆಂಗಳೂರು , ಮಂಗಳವಾರ, 16 ಮೇ 2017 (16:01 IST)
ಅನಾರೋಗ್ಯದಿಂದಾಗಿ ಎಂ.ಎಸ್.ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾರ್ವತಮ್ಮ ರಾಜಾಕುಮಾರ್ ಇನ್ನೆರೆಡು ದಿನಗಳಲ್ಲಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಆಸ್ಪತ್ರೆಯ ವೈದ್ಯ ಸಂಜಯ್ ಕುಲ್ಕರ್ಣಿ ಹೇಳಿದ್ದಾರೆ.
 
ಪಾರ್ವತಮ್ಮ ರಾಜಕುಮಾರ್ ಅವರಿಗೆ ಹಿಂದೆ ಕಾಣಿಸಿಕೊಂಡಿದ್ದ ಬ್ರೆಸ್ಟ್ ಕ್ಯಾನ್ಸರ್ ಲಿವರ್‌ಗೆ ಹರಡಿರುವುದರಿಂದ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆಗೆ ಅವರು ಸ್ಪಂದಿಸುತ್ತಿರುವುದರಿಂದ ಬಹುಬೇಗ ಗುಣಮುಖರಾಗಲಿದ್ದಾರೆ ಎಂದು ತಿಳಿಸಿದ್ದಾರೆ.
 
ಶುಗರ್, ಬಿಪಿ ಏರಿಳಿತ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿರಿಸಿಕೊಂಡು ಚಿಕಿತ್ಸೆ ನೀಡಲಾಗುತ್ತದೆ. ಚೇತರಿಕೆ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
 
ಆಸ್ಪತ್ರೆಗೆ ಪುತ್ರರಾದ ಶಿವರಾಜ್ ಕುಮಾರ್, ಪುನೀತ್ ರಾಜ್‌ಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಮತ್ತು ಕುಟುಂಬದ ಇತರ ಸದಸ್ಯರು ಭೇಟಿ ನೀಡಿ ಪಾರ್ವತಮ್ಮ ರಾಜಕುಮಾರ್ ಅವರ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸುದೀಪ್ ಚಿತ್ರೀಕರಣಕ್ಕೆ ಭೇಟಿಕೊಟ್ಟ ಪುನೀತ್ ರಾಜ್ ಕುಮಾರ್