Select Your Language

Notifications

webdunia
webdunia
webdunia
webdunia

ಪಾಕಿಸ್ತಾನದ ಅಭಿಮಾನಿಯ ಗಾನ ನಮನ!

ವಿಡಿಯೋ
ಹೃದಯಾಘಾತದಿಂದ ನಿಧನರಾಗಿರುವ ಪುನೀತ್ಗೆ ಪಾಕಿಸ್ತಾನದ ಅಭಿಮಾನಿಯೊಬ್ಬರು ಗಾನ ನಮನ ಸಲ್ಲಿಸಿದ್ದಾರೆ.
‘ರಾಜಕುಮಾರ’ ಸಿನಿಮಾದ ‘ಗೊಂಬೆ ಹೇಳುತೈತೆ..’ ಹಾಗೂ ‘ಮಿಲನ’ ಸಿನಿಮಾದ ‘ನಿನ್ನಿಂದಲೇ ನಿನ್ನಿಂದಲೇ..’ ಗೀತೆಯನ್ನು ಹೇಳುವ ಮೂಲಕ ಶ್ರದ್ಧಾಂಜಲಿ ಅರ್ಪಿಸಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರೂ ಪುನೀತ್ ಅಭಿನಯಕ್ಕೆ ಮರುಳಾಗಿದ್ದರು. ಅವರ ಅನೇಕ ಸಿನಿಮಾಗಳು ಬೇರೆ ಬೇರೆ ಭಾಷೆಗಳಿಗೆ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗಿವೆ. ಅವುಗಳನ್ನು ನೋಡಿದ ಬೇರೆ ರಾಜ್ಯ-ದೇಶಗಳ ಜನರು ಪುನೀತ್ಗೆ ಅಭಿಮಾನಿಗಳಾಗಿದ್ದರು. ಇಂದು ಅಪ್ಪು ನಮ್ಮೊಂದಿಗಿಲ್ಲ ಎಂಬ ಸತ್ಯವನ್ನು ಯಾರಿಗೂ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ.


Share this Story:

Follow Webdunia kannada

ಮುಂದಿನ ಸುದ್ದಿ

ಅಭಿಮಾನಿಗಳು ಸಂಯಮದಿಂದ ವರ್ತಿಸಬೇಕು: ಸಿಎಂ ಬೊಮ್ಮಾಯಿ