ತೆಲಂಗಾಣ: ಖ್ಯಾತ ಜನಪದ ಕಲಾವಿದ, ಪದ್ಮಶ್ರಿ ಪ್ರಶಸ್ತಿ ಪುರಸ್ಕೃತ ಪಾಸ್ತಮ್ ಮೊಗಿಲಯ್ಯ ಅವರ ಇಂದು ಅನಾರೋಗ್ಯದಿಂದ ನಿಧನರಾದರು.
ಇವರಿಗೆ ವೇಣು ಯೆಲ್ದಂಡಿ ನಿರ್ದೇಶನದ ಮತ್ತು ದಿಲ್ ರಾಜು ಅವರ ಬ್ಯಾನರ್ ಅಡಿಯಲ್ಲಿ ನಿರ್ಮಿಸಲಾದ 'ಬಲಗಂ' ಚಿತ್ರದ ತೊಡುಗ ಮಾ ತೊಡುಂಡಿ ಹಾಡು ಭಾರೀ ಜನಮನ್ನಣೆಯನ್ನು ತಂದುಕೊಟ್ಟಿತು. ಈ ಹಾಡು ತೆಲಂಗಾಣದಲ್ಲಿ ಭಾರಿ ಪ್ರಭಾವವನ್ನು ಸೃಷ್ಟಿಸಿತು.
ಈ ಹಾಡಿನ ಮೂಲಕ ವಾರಂಗಲ್ ಜಿಲ್ಲೆಯ ಕೊಮ್ರಮ್ಮ ಮತ್ತು ಮೊಗಿಲಯ್ಯ ದಂಪತಿಗಳು ರಾಜ್ಯಾದ್ಯಂತ ಹೆಸರುವಾಸಿಯಾದರು.
ಮೊಗಿಲಯ್ಯ ಗುರುವಾರ ಬೆಳಿಗ್ಗೆ ಆರೋಗ್ಯ ಸಮಸ್ಯೆಗಳಿಂದ ನಿಧನರಾದರು. ಮೊಗಿಲಯ್ಯನವರ ಚಿಕಿತ್ಸಾ ವೆಚ್ಚಕ್ಕಾಗಿ ಚಿತ್ರದ ನಿರ್ದೇಶಕ ವೇಣು ಯೆಲ್ದಂಡಿ ಚಿತ್ರತಂಡ ಮತ್ತು ಸರ್ಕಾರದೊಂದಿಗೆ ಆರ್ಥಿಕ ನೆರವು ನೀಡಿದ್ದರು.
ಇತ್ತೀಚೆಗಷ್ಟೇ ಪೊನ್ನಂ ಸತ್ಯಯ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಚಿವ ಪೊನ್ನಂ ಪ್ರಭಾಕರ್ ಅವರು ಮೊಗಿಲಯ್ಯನವರ ಕುಟುಂಬಕ್ಕೆ ಮನೆ ನಿವೇಶನ ಹಾಗೂ ಮನೆ ನಿರ್ಮಿಸಿಕೊಡುವುದಾಗಿ ಹಾಗೂ ಎಲ್ಲಾ ಚಿಕಿತ್ಸಾ ವೆಚ್ಚವನ್ನು ಭರಿಸುವುದಾಗಿ ಘೋಷಿಸಿದ್ದರು.
ಸ್ಪೀಕರ್ ಗದ್ದಂ ಪ್ರಸಾದ್ ಅವರು ₹ 1 ಲಕ್ಷ ಆರ್ಥಿಕ ನೆರವು ನೀಡಿದರು. ಇತ್ತೀಚೆಗೆ, ಮೆಗಾಸ್ಟಾರ್ ಚಿರಂಜೀವಿ ಅವರು ಮೊಗಿಲಯ್ಯ ಅವರ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿದು ಹೈದರಾಬಾದ್‌ನ NIMS ಆಸ್ಪತ್ರೆಯಲ್ಲಿ ಮೂತ್ರಪಿಂಡಕ್ಕೆ ಸಂಬಂಧಿಸಿದ ಚಿಕಿತ್ಸೆಯ ಸಮಯದಲ್ಲಿ ಹಣಕಾಸಿನ ನೆರವು ನೀಡಿದರು.