Webdunia - Bharat's app for daily news and videos

Install App

ನ್ಯೂಸ್ ನವರನ್ನು ಕಂಡರೆ ಉರಿದು ಬೀಳ್ತಿದ್ದ ದರ್ಶನ್ ಗೆ ಈಗ ಟಿವಿ ನೋಡುವ ಹಂಬಲ

Krishnaveni K
ಬುಧವಾರ, 4 ಸೆಪ್ಟಂಬರ್ 2024 (15:13 IST)
ಬಳ್ಳಾರಿ: ಒಂದು ಕಾಲದಲ್ಲಿ ಪತ್ರಕರ್ತರು, ಸುದ್ದಿವಾಹಿನಿಗಳೆಂದರೆ ಉರಿದುಬೀಳುತ್ತಿದ್ದ ನಟ ದರ್ಶನ್ ಗೆ ಈಗ ಜೈಲಿನಲ್ಲಿ ನ್ಯೂಸ್ ನೋಡುವ ಹಂಬಲವಾಗಿದ್ದು, ಟಿವಿ ವ್ಯವಸ್ಥೆ ಮಾಡಿ ಎಂದು ಜೈಲು ಅಧಿಕಾರಿಗಳಿಗೆ ದುಂಬಾಲು ಬಿದ್ದಿದ್ದಾರಂತೆ.

ನಿನ್ನೆ ರಾತ್ರಿಯಿಂದ ದರ್ಶನ್ ಟೆನ್ಷನ್ ಹೆಚ್ಚಾಗಿದ್ದು ಸರಿಯಾಗಿ ಊಟ, ನಿದ್ರೆಯೂ ಮಾಡದೇ ಚಡಪಡಿಸುತ್ತಿದ್ದಾರೆ ಎಂದು  ತಿಳಿದುಬಂದಿದೆ. ಇಂದು ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗುತ್ತದೆ ಎಂಬ ಸುದ್ದಿ ಬಂದ ಬೆನ್ನಲ್ಲೇ ದರ್ಶನ್ ತೀರಾ ಒತ್ತಡಕ್ಕೊಳಗಾಗಿದ್ದಾರೆ.

ಈ ನಡುವೆ ಅವರಿಗೆ ಹೊರಗೆ ಏನು ನಡೆಯುತ್ತದೆ, ಚಾರ್ಜ್ ಶೀಟ್ ಬಗ್ಗೆ ವಿವರ ಗೊತ್ತಾಗಬೇಕಾದರೆ ನ್ಯೂಸ್ ಗಳೇ ಗತಿಯಾಗಿದೆ. ಈ ಕಾರಣಕ್ಕೆ ಟಿವಿ ಹಾಕಿಸಿಕೊಡಿ ಎಂದು ಪದೇ ಪದೇ ಜೈಲು ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದಾರಂತೆ. ಇದರ ಜೊತೆಗೆ ಮನೆಯವರ ಜೊತೆ ಫೋನ್ ನಲ್ಲಿ ಮಾತನಾಡಲು ಅವಕಾಶ ಕೊಡಿ ಎಂದೂ ಕೇಳಿಕೊಂಡಿದ್ದಾರೆ.

ಸದ್ಯಕ್ಕೆ ಬಳ್ಳಾರಿ ಜೈಲಿನಲ್ಲಿ ಏಕಾಂಗಿಯಾಗಿರುವ ದರ್ಶನ್ ಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ. ಹೀಗಾಗಿ ತುಂಬಾ ಒತ್ತಡಕ್ಕೊಳಗಾಗಿದ್ದಾರೆ. ಮೊನ್ನೆಯಷ್ಟೇ ಡಿಐಜಿ ಶೇಷ ಬೇಡಿಕೆಯಿಟ್ಟರೆ ದರ್ಶನ್ ಗೆ ಟಿವಿ ವ್ಯವಸ್ಥೆ ಮಾಡಬಹುದು ಎಂದಿದ್ದರು. ಹೀಗಾಗಿ ಈಗ ದರ್ಶನ್ ಮನವಿಗೆ ಸ್ಪಂದಿಸಿ ಟಿವಿ ಕೊಡುತ್ತಾರಾ ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಕೆಜಿಎಫ್ ನಟ ದಿನೇಶ್ ಮಂಗಳೂರು ಇನ್ನಿಲ್ಲ

ದರ್ಶನ್‌ ಫ್ಯಾನ್ಸ್‌ಗಳಿಗೆ ಡಬಲ್‌ ಗುಡ್‌ನ್ಯೂಸ್‌: ಮಹತ್ವದ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮಿ

ಬಿಕಿನಿ ತೊಟ್ಟು ಪಡ್ಡೆ ಹೈಕಳ ಹಾರ್ಟ್‌ ಬೀಟ್ ಹೆಚ್ಚಿಸಿದ ಸೋನು ಗೌಡ

ಮತ್ತೇ ಒಂದಾಗುವ ನಿರ್ಧಾರ ಕೈಗೊಂಡ ಬಾಲಿವುಡ್‌ನ ಸ್ಟಾರ್ ಜೋಡಿ, ವಕೀಲರು ಹೇಳಿದ್ದೇನು

ಬೀದಿಗೆ ಬಂತು ಯಶ್ ತಾಯಿ, ದೀಪಿಕಾ ದಾಸ್ ಜಗಳ: ಆ ಯೋಗ್ಯತೆ ನಿಮಗಿಲ್ಲ ಎಂದ ದೀಪಿಕಾ

ಮುಂದಿನ ಸುದ್ದಿ
Show comments