ಮದುವೆ ದಿನ ಸಮಂತಾ ಪತಿ ರಾಜ್ ನಿಡಿಮೋರು ಬಗ್ಗೆ ಈ ವಿಚಾರ ಹೆಚ್ಚು ಹುಡುಕಾಟ

Sampriya
ಸೋಮವಾರ, 1 ಡಿಸೆಂಬರ್ 2025 (15:49 IST)
Photo Credit X
ನಿರ್ಮಾಪಕ ರಾಜ್ ನಿಡಿಮೋರು ಅವರನ್ನು ಕೈಹಿಡಿಯುವ ಮೂಲಕ ನಟಿ ಸಮಂತಾ ರುತ್ ಪ್ರಭು ಎರಡನೇ ಭಾರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೆಲ ವರ್ಷಗಳಿಂದ ಈ ಜೋಡಿ ಆಗಾಗ ಒಟ್ಟಿಗೆ ಕಾಣಿಸಿಕೊಂಡಿದ್ದು, ಪ್ರೀತಿಯಲ್ಲಿದ್ದಾರೆಂಬ ಸುದ್ದಿ ಹರಿದಾಡುತ್ತಲೇ ಇತ್ತು. ಇದೀಗ ಈ ಜೋಡಿ ಸದ್ದಿಲ್ಲದೆಯೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಜ್ ನಿಡಿಮೋರು ಅವರು ವಯಸ್ಸಿನ ಭಾರೀ ಹುಡುಕಾಟ ಜಾಸ್ತಿಯಾಗಿದೆ. 

ಏಪ್ರಿಲ್ 28, 1987 ರಂದು ಜನಿಸಿದ ಸಮಂತಾ ರುತ್ ಪ್ರಭು ಅವರಿಗೆ 2025ರಲ್ಲಿ 38 ವರ್ಷಗಳಾಗಿದೆ. ನಿರ್ದೇಶಕ ರಾಜ್
ನಿಡಿಮೋರು ಅವರು ಆಗಸ್ಟ್ 4, 1979 ರಂದು ಜನಿಸಿದರು. ಅದರಂತೆ ನಿರ್ದೇಶಕನಿಗೆ 46 ವರ್ಷ ವಯಸ್ಸಾಗಿದೆ. 

ನಾಗಚೈತನ್ಯ ಅವರನ್ನು 2017ರಲ್ಲಿ ಮದುವೆಯಾಗಿದ್ದ  ಸಮಂತಾ ಅವರು 2021ರಲ್ಲಿ ಡಿವೋರ್ಸ್ ಪಡೆದು ದೂರವಾಗಿದ್ದರು. ಈ ಜೋಡಿಯೂ ಪ್ರೀತಿ ಮಾಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ವೈಯಕ್ತಿಕ ಕಾರಣದಿಂದ ಈ ಜೋಡಿ ದೂರ ದೂರವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರ ಡೀವೋರ್ಸ್ ವಿಚಾರ ಭಾರೀ ಚರ್ಚೆಯಾಗಿತ್ತು. 

ನಾಗಚೈತನ್ಯ ಅವರು 2024ರಲ್ಲಿ ನಟಿ, ಮಾಡೆಲ್ ಶೋಭಿತಾ ದೂಳಿಪಾಲ ಅವರನ್ನು ಕೈಹಿಡಿದಿದ್ದರು. ಇನ್ನೂ ನಾಗಚೈತನ್ಯ ಅವರಿಂದ ದೂರವಾದ ಬಳಿಕ ಸಮಂತಾ ಅವರ ಹೆಸರು ರಾಜ್ ನಿಡಿಮೋರ್ ಜತೆ ತಳುಕು ಹಾಕಿತ್ತು. ಈ ಜೋಡಿ ವಿದೇಶದಲ್ಲಿ ಹಾಗೂ ಮನೆಯಲ್ಲಿ ವಿಶೇಷ ಸಮಾರಂಭದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದರು. ಈ ಜೋಡಿ ಪ್ರೀತಿಯಲ್ಲಿದ್ದಾರೆಂಬ ಸುದ್ದಿಯಲ್ಲಿರುವಾಗಲೇ ಇದೀಗ ಗುಟ್ಟಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಮದುವೆಯಲ್ಲಿ ಕುಟುಂಬದವರು ಹಾಗೂ ಸ್ನೇಹಿತರು ಪಾಲ್ಗೊಂಡಿದ್ದರು. 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮದುವೆ ದಿನ ಸಮಂತಾ ಪತಿ ರಾಜ್ ನಿಡಿಮೋರು ಬಗ್ಗೆ ಈ ವಿಚಾರ ಹೆಚ್ಚು ಹುಡುಕಾಟ

ದರ್ಶನ್‌ ಅಭಿಮಾನಿಗಳಿಗೆ ಗುಡ್‌ನ್ಯೂಸ್‌: ಚಾಲೆಂಜಿಂಗ್‌ ಸ್ಟಾರ್‌ ಧ್ವನಿಯಲ್ಲೇ ಡೆವಿಲ್ ಟ್ರೇಲರ್ ದಿನಾಂಕ ರಿವಿಲ್‌

ನಿರ್ದೇಶಕ ರಾಜ್ ನಿಡಮೋರು ಜೊತೆ ಸದ್ದಿಲ್ಲದೇ ಮದುವೆಯಾದ ಸಮಂತಾ

ರಣಬೀರ್ ಕಪೂರ್ ದೈವದ ಅಪಹಾಸ್ಯ ಮಾಡುತ್ತಿದ್ದಾಗ ಸುಮ್ಮನಿದ್ರಾ ರಿಷಬ್ ಶೆಟ್ಟಿ: ಅಸಲಿ ವಿಡಿಯೋ ಇಲ್ಲಿದೆ

ರಣವೀರ್ ಸಿಂಗ್ ದೈವವನ್ನು ಅನುಕರಿಸಿ, ದೆವ್ವ ಎಂದರೂ ನಗುತ್ತಲೇ ಕೂತಾ ರಿಷಬ್ ಶೆಟ್ಟಿ, ಭಾರೀ ಆಕ್ರೋಶ

ಮುಂದಿನ ಸುದ್ದಿ
Show comments