Webdunia - Bharat's app for daily news and videos

Install App

ಓಲ್ಡ್ ಮಾಂಕ್ ಟ್ರೇಲರ್ ಬಿಡುಗಡೆ ‌ಮಾಡಿದ ಪವರ್ ಸ್ಟಾರ್

Webdunia
ಶುಕ್ರವಾರ, 27 ಆಗಸ್ಟ್ 2021 (17:10 IST)
ಶ್ರೀನಿ ಅಭಿನಯಿಸಿ, ನಿರ್ದೇಶಿಸಿರುವ "ಓಲ್ಡ್
ಮಾಂಕ್" ಚಿತ್ರದ ಟ್ರೇಲರ್ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದಾರೆ.
ಟ್ರೇಲರ್ ಬಿಡುಗಡೆ ‌ಮಾಡಿ ಮಾತನಾಡಿದ್ದ, ಪುನೀತ್ ರಾಜ್‍ಕುಮಾರ್, ಶ್ರೀನಿ‌ ಬಹಳ ದಿನಗಳಿಂದ ನನಗೆ ಪರಿಚಯ. ಅವರ ಹಿಂದಿನ ಚಿತ್ರಗಳನ್ನು ನೋಡಿದ್ದೇನೆ. ಈ ಚಿತ್ರದ ಟ್ರೇಲರ್ ಕೂಡ ಚೆನ್ನಾಗಿದೆ. ಚಿತ್ರ ಕೂಡ  ಚೆನ್ನಾಗಿರುತ್ತದೆ ಎಂಬ ನಂಬಿಕೆಯಿದೆ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದು ಹಾರೈಸಿದರು.
ಈ ಚಿತ್ರದ ಕಥೆ ಆರಂಭವಾಗುವುದು ವೈಕುಂಠದಲ್ಲಿ. ಮಹಾವಿಷ್ಣು ಹಾಗೂ ನಾರದರ ಸಂಭಾಷಣೆ ಮೂಲಕ. ಓಲ್ಡ್ ‌ಮಾಂಕ್ ಅಂದರೆ ಹಿರಿಯ ಸನ್ಯಾಸಿ ಎಂದು ಶೀರ್ಷಿಕೆ ಅರ್ಥ ತಿಳಿಸಿದ ನಾಯಕ - ನಿರ್ದೇಶಕ ಶ್ರೀನಿ, ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್ ಟೈನರ್ ಎನ್ನುತ್ತಾರೆ. ಟ್ರೇಲರ್ ಬಿಡುಗಡೆ ಮಾಡಿದ ಪುನೀತ್ ರಾಜ್‍ಕುಮಾರ್ ಅವರಿಗೆ ಹಾಗೂ ಚಿತ್ರ ಉತ್ತಮವಾಗಿ ಮೂಡಿಬರಲು ಸಹಕರಿಸಿದ ಚಿತ್ರತಂಡದ ಸಮಸ್ತರಿಗೂ ಶ್ರೀನಿ ಧನ್ಯವಾದ ಅರ್ಪಿಸಿದರು.
ನಾನು ಅಭಿನಯಿಸುತ್ತಿರುವ ಚಿತ್ರಗಳ ಪೈಕಿ ಭಾರೀ ನಿರೀಕ್ಷೆಯಿಟ್ಟುಕೊಂಡಿರುವ ಚಿತ್ರ "ಓಲ್ಡ್ ಮಾಂಕ್". ಶ್ರೀನಿ ಅವರ ಕಾರ್ಯವೈಖರಿ ಅದ್ಭುತ. ಚಿತ್ರ ಗೆಲ್ಲುವುದು ಖಚಿತ ಎಂದರು ನಾಯಕಿ ಅದಿತಿ ಪ್ರಭುದೇವ.
ಹಿರಿಯ ನಟ ಕಲಾತಪಸ್ವಿ ರಾಜೇಶ್ ಅವರನ್ನು ಚಿತ್ರತಂಡ ಸನ್ಮಾನಿಸಿತು. ರಾಜೇಶ್ ಸಹ ಈ ಚಿತ್ರದಲ್ಲಿ ನಟಿಸಿದ್ದಾರೆ.
ನಾನು ಎರಡುವರ್ಷದಿಂದ ಮನೆ ಅಂಗಳ ಬಿಟ್ಟು ಆಚೆ ಬಂದಿಲ್ಲ. ಶ್ರೀನಿ ಪ್ರೀತಿಯ ಒತ್ತಾಯಕ್ಕೆ ಇಲ್ಲಿಗೆ. ಬಂದಿದ್ದೀನಿ. ಚಿಕ್ಕಪಾತ್ರದಲ್ಲಿ ಅಭಿನಯಿಸಿದ್ದೇನೆ. ಚಿತ್ರ ಉತ್ತಮವಾಗಿ ಮೂಡಿಬಂದಿರಲಿದೆ ನೋಡಿ ಹರಸಿ ಎಂದರು ರಾಜೇಶ್.
ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಪಾತ್ರ ಚಿಕ್ಕದಾದರೂ ಎಲ್ಲರ ಮನದಲ್ಲೂ ಉಳಿಯುತ್ತದೆ.  ಎಸ್ ನಾರಾಯಣ್ ಅವರ ಜೊತೆ ನಟಿಸಿದ್ದು ತುಂಬಾ ಸಂತೋಷ ತಂದಿದೆ. ಶ್ರೀನಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ಒಳ್ಳೆಯದಾಗಲಿ ಎಂದರು ನಟ ಸುನೀಲ್ ರಾವ್.
ಸಂಗೀತದ ಬಗ್ಗೆ ಸಂಗೀತ ನಿರ್ದೇಶಕರಾದ ಸೌರಭ್ - ವೈಭವ್ ಹಾಗೂ ಸಂಭಾಷಣೆ ಬಗ್ಗೆ ಪ್ರಸನ್ನ ಮಾತನಾಡಿದರು. ಆನಂದ್ ಆಡಿಯೋ ಶ್ಯಾಮ್ ಶುಭ ಕೋರಿದರು. ಕಥೆ ರಚಿಸುವಲ್ಲಿ ಶ್ರೀನಿಯೊಂದಿಗೆ ಕಾರ್ಯ ನಿರ್ವಹಿಸಿರುವ ಸಂತೋಷ್, ಪ್ರಸನ್ನ ಹಾಗೂ ಶೃತಿ ತಮ್ಮ ಅನುಭವ ಹಂಚಿಕೊಂಡರು.
ಪ್ರದೀಪ್ ಶರ್ಮ, ಸೃಜನ್ ಯರಬೋಳು , ಸೌರಭ್ - ವೈಭವ್ ಹಾಗೂ ಶ್ರೀನಿ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಭರತ್ ಪರಶುರಾಮ್ ಛಾಯಾಗ್ರಹಣ, ದೀಪು ಎಸ್ ಕುಮಾರ್ ಸಂಕಲನ ಹಾಗೂ ಪ್ರಕಾಶ್ ಪುಟ್ಟಸ್ವಾಮಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
ಶ್ರೀನಿ, ಅದಿತಿ ಪ್ರಭುದೇವ, ಕಲಾತಪಸ್ವಿ ರಾಜೇಶ್, ಕಲಾಸಾಮ್ರಾಟ್ ಎಸ್ ನಾರಾಯಣ್, ಸುನೀಲ್ ರಾವ್, ಸಿಹಿಕಹಿ ಚಂದ್ರು, ಸುಜಯ್ ಶಾಸ್ತ್ರಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

Darshan Thoogudeepa: ದರ್ಶನ್ ಆಂಡ್ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್

Renukaswamy Case: ಎರಡನೇ ಭಾರೀ ಜೈಲು ಸೇರಿದ ದರ್ಶನ್‌

ಏನೂ ಆಗಲ್ಲ ಬಾಸ್, ನಿಮ್ಮೊಂದಿಗೆ ನಾವಿದ್ದೇವೆ: ಡಿಬಾಸ್ ಗೆ ಫ್ಯಾನ್ಸ್ ಫುಲ್ ಸಪೋರ್ಟ್

ಫೇವರೇಟ್‌ ಕಲರ್‌ನ ಬಟ್ಟೆ, ಲಿಪ್‌ಸ್ಟಿಕ್‌, ಕ್ಲಿಪ್‌ ಹಾಕಿ ಗ್ಲಾಮರ್‌ ಲುಕ್‌ನಲ್ಲೇ ಹೊರಟ ಪವಿತ್ರಾ

ಜೀಪ್ ನಲ್ಲೂ ಬರಲಿಲ್ಲ, ಪತ್ನಿ ಬಳಿಯೂ ಬರಲಿಲ್ಲ, ದರ್ಶನ್ ಪ್ಲ್ಯಾನ್ ಏನು

ಮುಂದಿನ ಸುದ್ದಿ
Show comments