Webdunia - Bharat's app for daily news and videos

Install App

P Jayachandran: ಒಲವಿನ ಉಡುಗೊರೆ ಹಾಡಿ ಕನ್ನಡಿಗರ ರಂಜಿಸಿದ್ದ ಪಿ ಜಯಚಂದ್ರನ್ ಇನ್ನಿಲ್ಲ

Krishnaveni K
ಶುಕ್ರವಾರ, 10 ಜನವರಿ 2025 (09:31 IST)
Photo Credit: X
ತಿರುವನಂತಪುರಂ: ಒಲವಿನ ಉಡುಗೊರೆ ಕೊಡಲೇನು ಎಂಬ ಹಾಡು ಹಾಡಿ ಕನ್ನಡಿಗರನ್ನು ರಂಜಿಸಿದ್ದ ಕೇರಳ ಮೂಲದ ಗಾಯಕ ಪಿ ಜಯಚಂದ್ರನ್ ಇನ್ನಿಲ್ಲ.

80 ವರ್ಷ ವಯಸ್ಸಿನ ಪಿ ಜಯಚಂದ್ರನ್ ಕಳೆದ ಕೆಲವು ಸಮಯದಿಂದ ಕ್ಯಾನ್ಸರ್ ರೋಗದಿಂದ ಬಳಲುತ್ತಿದ್ದರು. ಇದೀಗ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಅವರ ಸಾವಿಗೆ ಅನೇಕ ಸೆಲೆಬ್ರಿಟಿಗಳು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಜಯಚಂದ್ರನ್ ಮಲಯಾಳಂ, ತಮಿಳು, ತೆಲುಗು, ಕನ್ನಡ ಸೇರಿದಂತೆ ಸುಮಾರು 16 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ. ಮಲಯಾಳಂನಲ್ಲಂತೂ ಯೇಸುದಾಸ್ ಬಳಿಕ ಅವರೇ ಒಂದು ಕಾಲದಲ್ಲಿ ಹಿಟ್ ಹಾಡುಗಳ ಸರದಾರರಾಗಿದ್ದವರು. ಕನ್ನಡದಲ್ಲೂ ಕೆಲವು ಹಾಡುಗಳನ್ನು ಜಯಚಂದ್ರನ್ ಹಾಡಿದ್ದು ಎಲ್ಲವೂ ಸೂಪರ್ ಹಿಟ್ ಹಾಡುಗಳೇ ಎನ್ನುವುದು  ವಿಶೇಷ.

ಕನ್ನಡದಲ್ಲಿ ಪಿ ಜಯಚಂದ್ರನ್ ಹಾಡಿದ ಹಾಡುಗಳೆಂದರೆ ಒಲವಿನ ಉಡುಗೊರೆ ಕೊಡಲೇನು, ಮಂದಾರ ಪುಷ್ಪವು ನೀನೇ, ಹಿಂದೂಸ್ಥಾನವು ಎಂದೂ ಮರೆಯದ, ಚಂದ ಚಂದ ಗುಲಾಬಿ ತೋಟವು, ಮಾನಸ ಸರೋವರ ಹಾಡುಗಳು ಸೇರಿವೆ. ಮಲಯಾಳಂ ಒಂದೇ ಭಾಷೆಯಲ್ಲಿ 15 ಸಾವಿರ ಹಾಡು ಹಾಡಿದ ಕೀರ್ತಿ ಅವರದ್ದಾಗಿದೆ. ಇದೀಗ ದಿಗ್ಗಜ ಕಲಾವಿದ ನೆನಪು ಮಾತ್ರ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments