Webdunia - Bharat's app for daily news and videos

Install App

ಸಂದೇಶ್ ಪ್ರೊಡಕ್ಷನ್ ಜೊತೆ ಒಡೆಯನ ಹ್ಯಾಟ್ರಿಕ್ ಹಂಗಾಮ!

Webdunia
ಮಂಗಳವಾರ, 10 ಡಿಸೆಂಬರ್ 2019 (15:40 IST)
ಸಂದೇಶ್ ನಾಗರಾಜ್ ಅರ್ಪಿಸಿ, ಎನ್ ಸಂದೇಶ್ ನಿರ್ಮಾಣ ಮಾಡಿರುವ ಒಡೆಯ ಚಿತ್ರ ಈ ವಾರ ತೆರೆಗಾಣುತ್ತಿದೆ. ಗೆಳೆತನಕ್ಕೆ ಸದಾ ಸಾಥ್ ನೀಡುವ, ಎಲ್ಲ ವ್ಯಹಾರದಾಚೆಗೆ ಪ್ರೀತಿ ಸೂಸುವ ಸ್ವಭಾವದ ದರ್ಶನ್ ಅಂಥಾದ್ದೇ ಸ್ನೇಹವನ್ನು ಸಂದೇಶ್ ಪ್ರೊಡಕ್ಷನ್ ಬ್ಯಾನರಿನತ್ತಲೂ ಇಟ್ಟುಕೊಂಡಿದ್ದಾರೆ. ಈ ಸ್ನೇಹ, ಪ್ರೀತಿಯ ಕಾರಣದಿಂದಲೇ ಈ ಹಿಂದೆ ಈ ಬ್ಯಾನರಿನಲ್ಲಿ ಅವರು ಪ್ರಿನ್ಸ್ ಮತ್ತು ಮಿಸ್ಟರ್ ಐರಾವತ ಚಿತ್ರಗಳಲ್ಲಿ ನಟಿಸಿದ್ದಾರೆ. ಅವರೆಡೂ ಕೂಡಾ ಸೂಪರ್ ಹಿಟ್ ಸಿನಿಮಾಗಳಾಗಿ ದಾಖಲಾಗಿದ್ದವು. ಒಡೆಯ ಆ ಸಾಲಿನಲ್ಲಿ ಹ್ಯಾಟ್ರಿಕ್ ಗೆಲುವು ದಾಖಲಿಸೋದರಲ್ಲಿ ಯಾವ ಸಂದೇಹವೂ ಇಲ್ಲ.
odeya
ಸಂದೇಶ್ ನಾಗರಾಜ್ ಅವರ ಮೇಲೆ ಅತೀವ ಪ್ರೀತಿ, ಗೌರವ ಇಟ್ಟಿಕೊಂಡೇ ಅವರ ಪುತ್ರ ಎನ್. ಸಂದೇಶ್ರೊಂದಿಗೆ ಸ್ನೇಹ ಹೊಂದಿರುವವರು ದರ್ಶನ್. ಈ ಸ್ನೇಹದ ಕಾರಣದಿಂದಲೇ ಸಂದೇಶ್ ‘ಪ್ರೊಡಕ್ಷನ್ ಬ್ಯಾನರ್ ಆರಂಭವಾಗಿ ಅದರಲ್ಲಿ ಪ್ರಿನ್ಸ್, ಮಿಸ್ಟರ್ ಐರಾವತ ಚಿತ್ರಗಳೆಲ್ಲವೂ ಸೂಪರ್ ಹಿಟ್ ಆಗಿ ದಾಖಲಾಗಿವೆ. ಈ ಬಾರಿ ಹ್ಯಾಟ್ರಿಕ್ ಬಾರಿಸಬೇಕೆಂಬ ಇರಾದೆಯಿಂದಲೇ ಸಂದೇಶ್ ಈ ಸಿನಿಮಾವನ್ನು ಅಚ್ಚುಕಟ್ಟಾಗಿ ರೂಪಿಸಿದ್ದಾರಂತೆ. ಅದರ ಪ್ರತಿಫಲವೆಲ್ಲವೂ ಟೀಸರ್, ಟ್ರೇಲರ್ ಮತ್ತು ಹಾಡುಗಳ ಮೂಲಕ ಪ್ರತಿಫಲಿಸಲಾರಂಭಿಸಿವೆ.
ಎಂ.ಡಿ ಶ್ರೀಧರ್ ದರ್ಶನ್ ಅವರನ್ನು ಬೇರೆಯದ್ದೇ ಬಗೆಯಲ್ಲಿ ಅಭಿಮಾನಿಗಳ ಮುಂದೆ ತರಬೇಕೆಂಬ ಉದ್ದೇಶದಿಂದಲೇ ಇಡೀ ಸಿನಿಮಾವನ್ನು ರೂಪಿಸಿದ್ದಾರೆ. ಈಗಾಗಲೇ ಫಸ್ಟ್ ಲುಕ್ ಮತ್ತು ಟಿಸರ್ಗೆ ಸಿಕ್ಕಿರುವ ಅಭೂತಪೂರ್ವ ಸದಾಭಿಪ್ರಾಯಗಳೇ ಒಡೆಯನನ್ನು ಬೇರೊಂದು ಮಟ್ಟಕ್ಕೆ ಕೊಂಡೊಯ್ದಿದೆ. ಯಾವುದೇ ಸಿನಿಮಾ ಮಾಡಿದರೂ ಅದ್ದೂರಿತನ ಸಂದೇಶ್ ಪ್ರೊಡಕ್ಷನ್ನಿನ ಟ್ರೇಡ್ ಮಾರ್ಕ್ ಇದ್ದಂತೆ. ಅದು ಒಡೆಯನ ವಿಚಾರದಲ್ಲಿ ಮತ್ತಷ್ಟು ಮಿರುಗುವಂತೆ ಮೂಡಿ ಬಂದಿದೆಯಂತೆ. ಇಲ್ಲಿ ಬಹು ದೊಡ್ಡ ತಾರಾಗಣವೇ ದರ್ಶನ್ ಅವರಿಗೆ ಸಾಥ್ ಕೊಟ್ಟಿದೆ. ಇಲ್ಲಿನ ನೇಟಿವಿಟಿಗೆ ತಕ್ಕಂಥಾ ಅದ್ಭುತವಾದ ಕಥೆ, ಅದಕ್ಕೆ ತಕ್ಕುದಾದ ಹಾಡು ಮುಂತಾದವುಗಳೊಂದಿಗೆ ಒಡೆಯ ಅಭಿಮಾನದಾಚೆಗೂ ಎಲ್ಲರಿಗೂ ಇಷ್ಟವಾಗುವಂತೆ ಮೂಡಿ ಬಂದಿದೆಯಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಸು ಫ್ರಮ್ ಸೋ ಶೋ ಕಡಿಮೆಯಾಯ್ತು ಎಂದ ಪ್ರೇಕ್ಷಕರಿಗೆ ರಾಜ್ ಬಿ ಶೆಟ್ಟಿ ಹೇಳಿದ್ದೇನು

ಸ್ಟಾರ್ ಗಳಿಲ್ಲದಿದ್ದರೂ ಮೊದಲ ದಿನವೇ ಸು ಫ್ರಮ್ ಸೋ ಸಿನಿಮಾ ಭರ್ಜರಿ ಕಲೆಕ್ಷನ್

ಥೈಲ್ಯಾಂಡ್ ನಿಂದ ವಾಪಸ್ ಆದ ದರ್ಶನ್ ಗೆ ವಿವಿಐಪಿ ಭದ್ರತೆ: video

ಆ ಕ್ಷಣ ಶಾಶ್ವತವಾಗಿ ಅಚ್ಚೊತ್ತಿದೆ: ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ತಂದೆ ಬಗ್ಗೆ ಶ್ರುತಿ ಹಾಸನ್ ಹೆಮ್ಮೆ

ಪೂಜಾ, ಕಿಶನ್ ಮದುವೆ ಬೆನ್ನಲ್ಲೇ ಆದಿ, ಭಾಗ್ಯಗೇ ಮದುವೆ ಮಾಡುವಂತೆ ಡೈರೆಕ್ಟರ್‌ಗೆ ಫ್ಯಾನ್ಸ್ ಬೇಡಿಕೆ

ಮುಂದಿನ ಸುದ್ದಿ
Show comments