ರಮ್ಯಾಗೆ ಅಶ್ಲೀಲ ಮೆಸೇಜ್‌, ಜೀವಬೆದರಿಕೆ ಪ್ರಕರಣ: ತನಿಖೆಯಲ್ಲಿ ಭಾರೀ ಬೆಳವಣಿಗೆ

Sampriya
ಮಂಗಳವಾರ, 19 ಆಗಸ್ಟ್ 2025 (18:06 IST)
ಬೆಂಗಳೂರು: ರೇಣುಕಾಸ್ವಾಮಿ ಪ್ರಕರಣದ ಸುಪ್ರೀಂ ತೀರ್ಪು ಬಗ್ಗೆ ಪ್ರತಿಕ್ರಿಯಿಸಿದ ನಟಿ ರಮ್ಯಾ ವಿರುದ್ಧ ಅಶ್ಲೀಲ ಸಂದೇಶ ಹಾಗೂ ಜೀವಬೆದರಿಕೆಯೊಡ್ಡಿದ ಪ್ರಕರಣ ಸಂಬಂಧ ಮತ್ತಿಬ್ಬರನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ 9ಕ್ಕೆ ಏರಿದೆ. 

ಉಡುಪಿ ಮೂಲದ ಆದರ್ಶ್ ಮತ್ತು ಸಂಜಯ್ ಎಂಬುವವರನ್ನು ಬಂಧಿಸಲಾಗಿದ್ದು, ಪ್ರಕರಣದಲ್ಲಿ ಒಟ್ಟು ಬಂಧಿತರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣ ಸಂಬಂಧ ಸುಪ್ರೀಂ ಕೋರ್ಟ್ ತೀರ್ಪನ್ನು ಮೆಚ್ಚಿ ನಟಿ ರಮ್ಯಾ ಪೋಸ್ಟ್ ಹಂಚಿಕೊಂಡಿದ್ದರು. ಆ ಬಳಿಕ ದರ್ಶನ್ ಅಭಿಮಾನಿಗಳು ಎಂಬ ಅಕೌಂಟ್‌ನಿಂದ ನಟಿಗೆ ಅಶ್ಲೀಲ ಸಂದೇಶ ಹಾಗೂ ಜೀವಬೆದರಿಕೆಯನ್ನು ಹಾಕಿದ್ದಾರೆ. ಅದನ್ನು ನಟಿ ತನ್ನ ಇನ್‌ಸ್ಟಾಗ್ರಾಂ ಸ್ಟೋರಿನಲ್ಲಿ ಹಂಚಿಕೊಂಡಿದ್ದರು. ಅದಲ್ಲದೆ ಪೊಲೀಸ್ ಕಮಿಷನರ್‌ಗೆ 43ಅಕೌಂಟ್‌ಗಳ ವಿರುದ್ಧ ದೂರನ್ನು ನೀಡಿದ್ದರು. 

ರಮ್ಯಾ ನೀಡಿದ ದೂರಿನ ಅನ್ವಯ ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಭಾರತೀಯ ನ್ಯಾಯ ಸಂಹಿತೆ ಕಾಯ್ದೆಯ ಸೆಕ್ಷನ್‍ಗಳಾದ 2023ರ 351(2), 351(3), 352, 75(1) 75(1)(Iಗಿ) ಹಾಗೂ 79 ಅಡಿಯಲ್ಲಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. 

ಬಳಿಕ ಓಬಣ್ಣ, ಗಂಗಾಧರ್, ರಾಜೇಶ್, ಭುವನ್‍ಗೌಡ, ಮಂಜುನಾಥ್, ಪ್ರಮೋದ್ ಗೌಡ ಹಾಗೂ ಸಂತೋಷ್‌ ಎಂಬ ಏಳು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಮತ್ತಿಬ್ಬರನ್ನು ಬಂಧಿಸಲಾಗಿದೆ. <>

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಮತ್ತೇ ಪ್ರೀತಿಯಲ್ಲಿ ಬಿದ್ರಾ ಸಾನಿಯಾ ಮಿರ್ಜಾ, ಕುತೂಹಲ ಮೂಡಿಸಿದ ಈ ಫೋಟೋ

ಮಧ್ಯದ ಬೆರಳು ತೋರಿಸಿ ದುರ್ವತನೆ ತೋರಿದ ಆರ್ಯನ್ ಖಾನ್‌ಗೆ ಬಿಗ್‌ ಶಾಕ್‌

ಎರಡನೇ ಬಾರಿ ಜೈಲು ಸೇರಿದ ದರ್ಶನ್ ಎಷ್ಟು ತೂಕ ಇಳಿಸಿಕೊಂಡಿದ್ದಾರೆ: ಶಾಕಿಂಗ್

ಡಿಡಿಎಲ್‌ಜಿಗೆ 30 ವರ್ಷ: ಲಂಡನ್‌ನಲ್ಲಿ ಗಮನ ಸೆಳೆದ ಶಾರುಖ್‌, ಕಾಜೋಲ್ ಜೋಡಿ

ಕಾಂತಾರ 2ರ ನಟ ನಟಿಗೆ ಐಎಂಡಿಬಿ ಟಾಪ್ ಪಟ್ಟಿಯಲ್ಲಿ ಸ್ಥಾನ, ಯಾರಿಗೆ ಗೊತ್ತಾ

ಮುಂದಿನ ಸುದ್ದಿ
Show comments