Publish Date: Fri, 09 Jun 2023 (20:50 IST)
Updated Date: Fri, 09 Jun 2023 (20:42 IST)
2018ರಲ್ಲಿ ಭಾರಿ ಸದ್ದು ಮಾಡಿದ್ದ ಮೀಟೂ ಆಂದೋಲನದಲ್ಲಿ ಅರ್ಜುನ್ ಸರ್ಜಾ ಮೇಲೆ ನಟಿ ಶ್ರುತಿ ಹರಿಹರನ್ ಅವರು ಕೆಲವು ಗಂಭೀರ ಆರೋಪಗಳನ್ನು ಹೊರಿಸಿದ್ದರು. ನಟನಿಂದ ಲೈಂಗಿಕ ಕಿರುಕುಳ ಆಗಿದೆ ಎಂದು ಶ್ರುತಿ ಹರಿಹರನ್ ಆರೋಪಿಸಿದ್ದರು. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆದರೆ, ಪೊಲೀಸರಿಗೆ ಸಾಕ್ಷ್ಯ ಸಿಗದ ಕಾರಣ ಕೋರ್ಟ್ನಲ್ಲಿ ಬಿ ರಿಪೋರ್ಟ್ ಸಲ್ಲಿಕೆ ಮಾಡಿದ್ದರು. ಇದನ್ನು ಶ್ರುತಿ ಹರಿಹರನ್ ಚಾಲೆಂಜ್ ಮಾಡಿದ್ದರು. ಅವರಿಗೆ ಬೆಂಗಳೂರಿನ 8ನೇ ಎಸಿಎಂಎಂ ಕೋರ್ಟ್ನಿಂದ ನೋಟಿಸ್ ಜಾರಿ ಆಗಿದೆ. ಸಾಕ್ಷ್ಯ ಒದಗಿಸುವಂತೆ ಸೂಚಿಸಲಾಗಿದೆ. ಮೀಟೂ ಪ್ರಕರಣದಲ್ಲಿ ಪೊಲೀಸರು ಮೂರು ವರ್ಷ ತನಿಖೆ ನಡೆಸಿದರು. ಆದರೆ, ಸೂಕ್ತ ಸಾಕ್ಷಿಗಳು ಸಿಕ್ಕಿಲ್ಲ. ಹಾಗಾಗಿ ಪೊಲೀಸರು ಕೋರ್ಟ್ಗೆ ಬಿ-ರಿಪೋರ್ಟ್ ಸಲ್ಲಿಸಿದ್ದರು. ಪೊಲೀಸರಿಗೆ ಸಾಕ್ಷ್ಯಾಧಾರ ಒದಗಿಸುವಂತೆ ಶ್ರುತಿಗೆ ನೋಟಿಸ್ ನೀಡಿದೆ.