Publish Date: Sun, 19 Apr 2020 (09:18 IST)
Updated Date: Sun, 19 Apr 2020 (09:19 IST)
ಹೈದರಾಬಾದ್: ‘ಪುಷ್ಪ’ ಎಂಬ ಬಹುಭಾಷಾ ಸಿನಿಮಾದಲ್ಲಿ ಅಲ್ಲು ಅರ್ಜುನ್ ಗೆ ನಾಯಕಿಯಾಗಿ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಇದರ ಜತೆಗೆ ಅಭಿಮಾನಿಗಳಿಗೆ ನಿರಾಸೆಯ ಸುದ್ದಿಯೊಂದು ಕಾದಿದೆ.
ಮೂಲಗಳ ಪ್ರಕಾರ ಪುಷ್ಪ ಸಿನಿಮಾದಲ್ಲಿ ಅಲ್ಲು ಅರ್ಜುನ್ ಲಾರಿ ಡ್ರೈವರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಅವರಿಗೆ ಮೊದಲನೇ ನಾಯಕಿಯಾಗಿ ರಶ್ಮಿಕಾ ಮತ್ತು ಎರಡನೇ ನಾಯಕಿ ಪಾತ್ರಕ್ಕೆ ಹುಡುಕಾಟ ನಡೆದಿದೆ.
ಈ ಸಿನಿಮಾದಲ್ಲಿ ರಶ್ಮಿಕಾ ಮತ್ತು ಅಲ್ಲು ನಡುವೆ ರೊಮ್ಯಾಂಟಿಕ್ ಟ್ರ್ಯಾಕ್ ಇಲ್ಲ ಎನ್ನಲಾಗಿದೆ. ಇದು ಅಭಿಮಾನಿಗಳಿಗೆ ಕೊಂಚ ನಿರಾಸೆ ತರಬಹುದು. ಹಾಗಿದ್ದರೂ ಪುಷ್ಪ ಬಗ್ಗೆ ಕ್ರೇಜ್ ಏನೂ ಕಡಿಮೆಯಾಗಿಲ್ಲ.