ಫಿಲಂ ಚೇಂಬರ್ ನಲ್ಲಿ ಸಂಚಾರಿ ವಿಜಯ್ ಗೆ ಅನ್ಯಾಯ: ಚಂದ್ರಚೂಡ್, ಲಿಂಗದೇವ್ರು ಆಕ್ರೋಶ

Webdunia
ಶುಕ್ರವಾರ, 18 ಜೂನ್ 2021 (10:20 IST)
ಬೆಂಗಳೂರು: ಮೊನ್ನೆಯಷ್ಟೇ ಅಗಲಿದ ರಾಷ್ಟ್ರಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಗೆ ಗೌರವ ಸಲ್ಲಿಸದ ಫಿಲಂ ಚೇಂಬರ್ ನಡೆಗೆ ಪತ್ರಕರ್ತ, ಬರಹಗಾರ ಚಕ್ರವರ್ತಿ ಚಂದ್ರಚೂಡ್, ನಿರ್ದೇಶಕ ಲಿಂಗದೇವ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


ಫಿಲಂ ಚೇಂಬರ್ ನಲ್ಲಿ ಇತ್ತೀಚೆಗೆ ಅಗಲಿದ ಸಿನಿ ಮಂದಿಗೆ ಗೌರವ ಸಲ್ಲಿಸುವ ಕಾರ್ಯಕ್ರಮವನ್ನು ನಿನ್ನೆ ಆಯೋಜಿಸಲಾಗಿತ್ತು. ಆದರೆ ಇಲ್ಲಿ ವಿಜಯ್ ಫೋಟೋ ಕೂಡಾ ಹಾಕಿರಲಿಲ್ಲ. ಇದು ವಿಜಯ್ ಅಭಿಮಾನಿಗಳು, ಆಪ್ತರ ಆಕ್ರೋಶಕ್ಕೆ ಕಾರಣವಾಗಿದೆ.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಚಂದ್ರಚೂಡ್, ನಿಮ್ಮ ಶ್ರದ್ಧಾಂಜಲಿ ಸಭೆಯಲ್ಲಿ ನನ್ನ ಗೆಳೆಯ ಸಂಚಾರಿ ವಿಜಯ್ ದೊಂದು ಭಾವಚಿತ್ರ ಇಡಲು ಅಸಾಧ್ಯವಾಯಿತೇ? ನಿಮಗೊಂದು ಧಿಕ್ಕಾರ ಎಂದಿದ್ದಾರೆ. ಇನ್ನು ನಿರ್ದೇಶಕ ಲಿಂಗದೇವ್ರು ಕೂಡಾ ಸುದೀರ್ಘ ಬರವಣಿಗೆ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಗತಿಸಿದವರು ರಾಷ್ಟ್ರಪ್ರಶಸ್ತಿ ವಿಜೇತ ನಟರು, ಅಂಗದಾನ ಮಾಡಿ ಮಾದರಿಯಾದವರು. ಸರ್ಕಾರವೇ ಸರ್ಕಾರಿ ಗೌರವ ನೀಡಿ ವಿದಾಯ ಹೇಳಿತ್ತು. ಹಾಗಿರುವಾಗ ಪ್ರಾತಿನಿಧಿಕ ಸಂಸ್ಥೆಯಲ್ಲಿ ಗೌರವ ಸಲ್ಲಿಸದೇ ಇರುವುದು ಅವರ ಕುಟುಂಬಕ್ಕೆ ತೋರಿದ ಅಗೌರವ ಎಂದಿದ್ದಾರೆ. ಅಭಿಮಾನಿಗಳೂ ಫಿಲಂ ಚೇಂಬರ್ ನಡೆಗೆ ಆಕ್ರೋಶ  ವ್ಯಕ್ತಪಡಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಚೆನ್ನಾಗಿದ್ದೀರಾ ಅಂಕಲ್‌, ದರ್ಶನ್ ಪುತ್ರನ ಮುಗ್ಧತೆಗೆ ಶಿವಣ್ಣನ ಪ್ರೀತಿಯಾ ಮಾತು

ಮೂರನೇ ದಾಂಪತ್ಯಕ್ಕೂ ಅಂತ್ಯ ಹಾಡಿದ ಖ್ಯಾತ ನಟಿ ಮೀರಾ ವಾಸುದೇವನ್

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ಮುಂದಿನ ಸುದ್ದಿ
Show comments