Select Your Language

Notifications

webdunia
webdunia
webdunia
webdunia

ಕನ್ನಡ ಚಿತ್ರಕ್ಕೆ ಎಸಿ ಹಾಕಲ್ಲ, ಬೇಕಾದ್ರೆ ನೋಡಿ.. ಇಲ್ಲವಾದ್ರೆ ಎದ್ದೋಗಿ ಅಂದರಂತೆ..!

ಕನ್ನಡ ಚಿತ್ರಕ್ಕೆ ಎಸಿ ಹಾಕಲ್ಲ, ಬೇಕಾದ್ರೆ ನೋಡಿ.. ಇಲ್ಲವಾದ್ರೆ ಎದ್ದೋಗಿ ಅಂದರಂತೆ..!
ಬೆಂಗಳೂರು , ಶನಿವಾರ, 8 ಏಪ್ರಿಲ್ 2017 (15:53 IST)
ಕರ್ನಾಟಕದಲ್ಲಿ ಕನ್ನಡಿಗರೇ ಅನಾಥರಾಗಿದ್ದಾರಾ..? ಈ ಪ್ರಶ್ನೆ ಹುಟ್ಟಲು ಕಾರಣ ಬೆಂಗಳೂರಿನ ಮಾಲ್`ವೊಂದರಲ್ಲಿ ಇವತ್ತು ನಡೆದಿದೆ ಎನ್ನಲಾದ ಒಂದು ಘಟನೆ. ರಾಜಕುಮಾರ ಚಿತ್ರ ನೋಡಲು ನಾಗವಾರದ ಬಳಿಯ ಎಲಿಮೆಂಟ್ಸ್ ಮಾಲ್`ಗೆ ಹೋದ ಪ್ರೇಕ್ಷಕರಿಗೆ ಶಾಕ್ ಆಗಿದೆ. ಕನ್ನಡ ಚಿತ್ರಕ್ಕೆ ಎಸಿ ಹಾಕೋದಿಲ್ಲ. ಬೇಕಾದರೆ ನೋಡಿ ಇಲ್ಲವಾದರೆ ಹೊರಡಿ ಎಂದು ಮಾಲ್ ಸಿಬ್ಬಂದಿ ದುರ್ವರ್ತನೆ ತೋರಿದ್ದಾರೆಂದು ವರದಿಯಾಗಿದೆ. 
 

ಸಿನಿಮಾ ಆರಂಭವಾಗಿ ಅರ್ಧಗಂಟೆ ಕಳೆದರೂ ಎಸಿ ಹಾಕಿದಿದ್ದ ಬಗ್ಗೆ ಪ್ರೇಕ್ಷಕರು ಪ್ರಶ್ನಿಸಿದ್ದಾರೆ. ಆದರೂ, ಎಸಿ ಹಾಕಿಲ್ಲವಾದ್ದರಿಂದ ಪ್ರೇಕ್ಷಕರು ಮತ್ತೊಮ್ಮೆ ಎಸಿ ಕೇಳಿದ್ದಕ್ಕೆ ಕನ್ನಡ ಚಿತ್ರಕ್ಕ ಎಸಿ ಹಾಕುವುದಿಲ್ಲ ಎಂಬ ಉತ್ತರ ಬಂದಿದೆ ಎನ್ನಲಾಗಿದೆ. ಮಾಲ್ ಸಿಬ್ಬಂದಿಯ ಈ ವರ್ತನೆಯಿಂದ ಬೇಸತ್ತ ಜನ ಪ್ರತಿಭಟನೆ ಸಹ ನಡೆಸಿದ್ದಾರೆ.

ಈ ಬಗ್ಗೆ ಖಾಸಗಿ ಚಾನಲ್`ಗೆ ಪ್ರತಿಕ್ರಿಯಿಸಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ. ಗೋವಿಂದು, ಇಂತಹ ವರ್ತನೆ ತೋರಿದವರನ್ನ ಗಡಿಪಾರು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಮಾಲ್ ಮಾಲೀಕರನ್ನ ಛೇಂಬರ್`ಗೆ ಕರೆಸಿ ವಿವರಣೆ ಪಡೆಯುವುದಾಗಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಮ್ಸ್ ಆಸ್ಪತ್ರೆಯಿಂದ ಬಿಗ್ ಬಾಸ್ ಖ್ಯಾತಿಯ ಪ್ರಥಮ್ ಡಿಸ್ಚಾರ್ಜ್