ಕನ್ನಡ ನಟ ಅಚ್ಯುತ್ ಕುಮಾರ್ ಹಾಡಿಹೊಗಳಿದ ನಯನತಾರಾ

Krishnaveni K
ಶನಿವಾರ, 6 ಜನವರಿ 2024 (08:58 IST)
ಬೆಂಗಳೂರು: ಕನ್ನಡ ಮೂಲದ ನಟ ಅಚ್ಯುತ್ ಕುಮಾರ್ ಈಗ ತಮ್ಮ ಸಹಜ ಅಭಿನಯದಿಂದಾಗಿ ಪರಭಾಷೆಗಳಲ್ಲೂ ಅವಕಾಶ ಗಿಟ್ಟಿಸುತ್ತಿದ್ದಾರೆ.

ಅನ್ನಪೂರ್ಣಿ ಎನ್ನುವ ಸಿನಿಮಾದಲ್ಲಿ ಅಚ್ಯುತ್ ಕುಮಾರ್ ಸೌತ್ ನಂ.1 ನಟಿ ನಯನತಾರಾ ಜೊತೆ ನಟಿಸಿದ್ದರು. ಈ ಸಿನಿಮಾದಲ್ಲಿ ಇಬ್ಬರೂ ಅಪ್ಪ-ಮಗಳ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಈ ಸಿನಿಮಾದ ಬಗ್ಗೆ ನಯನತಾರಾ ಸಂದರ್ಶನವೊಂದರಲ್ಲಿ ಮಾತನಾಡುವಾಗ ಅಚ್ಯುತ್ ಕುಮಾರ್ ಬಗ್ಗೆ ಹಾಡಿಹೊಗಳಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

‘ನಿಜವಾಗಿಯೂ ಅವರು ನನಗೆ ಅಪ್ಪನಂತೇ ಇದ್ದರು. ಸೆಟ್ ನಲ್ಲಿ ಗಂಭೀರವಾಗಿಯೇ ಇರುತ್ತಿದ್ದರು. ಹೆಚ್ಚು ಮಾತನಾಡುತ್ತಿರಲಿಲ್ಲ. ನಾನಾಗಿಯೇ ಊಟ ಆಯ್ತಾ ಎಂದು ಕೇಳಿದರೆ ಆಯ್ತು ಎನ್ನುವುದೂ ಸ್ಪಷ್ಟವಾಗಿ ಕೇಳದಷ್ಟು ನಕ್ಕು ತಲೆಯಾಡಿಸುತ್ತಿದ್ದರು. ಮೂಲತಃ ಅವರು ತಮಿಳರಲ್ಲ. ಹಾಗಿದ್ದರೂ ಅವರ ಪಾತ್ರವನ್ನು ಎಷ್ಟು ಚೆನ್ನಾಗಿ ನಿಭಾಯಿಸಿದರು ಎಂದರೆ ನನಗೆ ನಿಜವಾದ ತಂದೆಯ ರೀತಿ ಅನಿಸಿತು’ ಎಂದು ಹಾಡಿ ಹೊಗಳಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಡಿಡಿಎಲ್‌ಜಿಗೆ 30 ವರ್ಷ: ಲಂಡನ್‌ನಲ್ಲಿ ಗಮನ ಸೆಳೆದ ಶಾರುಖ್‌, ಕಾಜೋಲ್ ಜೋಡಿ

ಕಾಂತಾರ 2ರ ನಟ ನಟಿಗೆ ಐಎಂಡಿಬಿ ಟಾಪ್ ಪಟ್ಟಿಯಲ್ಲಿ ಸ್ಥಾನ, ಯಾರಿಗೆ ಗೊತ್ತಾ

ನಂದಮೂರಿ ಬಾಲಕೃಷ್ಣ ಅಖಂಡ 2ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಭಾರೀ ನಿರಾಸೆ

ಲಡಾಖಿ ಮದುವೆಯಲ್ಲಿ ಕಂಗನಾ ಸಾಂಪ್ರದಾಯಿ ಲುಕ್‌ಗೆ ಫಿದಾ

ಬಿಡುಗಡೆಯಾದ ಒಂದೇ ತಿಂಗಳಲ್ಲಿ ಒಟಿಟಿಗೆ ಎಂಟ್ರಿಯಾದ ರಶ್ಮಿಕಾ ಮಂದಣ್ಣ ನಟನೆಯ ದಿ ಗರ್ಲ್‌ಫ್ರೆಂಡ್

ಮುಂದಿನ ಸುದ್ದಿ
Show comments