ಅಪಘಾತದ ಬಳಿಕ ಮೊದಲ ಬಾರಿಗೆ ಮಾಧ್ಯಮಗಳ ಮುಂದೆ ಬಂದು ಕಣ್ಣೀರು ಹಾಕಿದ ನಾಗಭೂಷಣ್

Webdunia
ಸೋಮವಾರ, 9 ಅಕ್ಟೋಬರ್ 2023 (19:25 IST)
ಬೆಂಗಳೂರು: ಇತ್ತೀಚೆಗೆ ಕೋಣನಕುಂಟೆ ಕ್ರಾಸ್ ಬಳಿ ನಟ ನಾಗಭೂಷಣ್ ಕಾರು ಅಪಘಾತಕ್ಕೀಡಾಗಿ ಓರ್ವ ಮಹಿಳೆ ಸಾವನ್ನಪ್ಪಿದ್ದರು.  ಆ ಪ್ರಕರಣದ ಬಗ್ಗೆ ಮಾತನಾಡಲು ಇದೇ ಮೊದಲ ಬಾರಿಗೆ ನಾಗಭೂಷಣ್ ಮಾಧ್ಯಮಗಳ ಮುಂದೆ ಬಂದಿದ್ದಾರೆ.

ನಾಗಭೂಷಣ್ ಕಾರು ಅಪಘಾತವಾದ ಬಳಿಕ ನಡೆದಿದ್ದೇನು, ಏನೆಲ್ಲಾ ಆಗಿದೆ ಎಂಬಿತ್ಯಾದಿ ವಿವರಗಳನ್ನು ನೀಡಿದ್ದಾರೆ. ಜೊತೆಗೆ ಘಟನೆಯಿಂದ ಮಾನಸಿಕವಾಗಿ ಕುಗ್ಗಿರುವುದಾಗಿ ಹೇಳಿದ್ದು, ಕಣ್ಣೀರು ಹಾಕಿದ್ದಾರೆ.

‘ಆ ಘಟನೆ ಬಳಿಕ ನಾನೂ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಹೀಗಾಗಿ ತಕ್ಷಣಕ್ಕೆ ನಿಮ್ಮ ಮುಂದೆ ಬರಲಿಲ್ಲ. ಘಟನೆ ನಡೆದಾಗ ನಾನೇ ಆ ಮಹಿಳೆಯನ್ನು ಕಾಪಾಡಬೇಕೆಂದು ಆಟೋದಲ್ಲಿ ಕೂರಿಸಿ ಆಸ್ಪತ್ರೆಗೆ ಸೇರಿಸಿದ್ದೆ. ನಾನು ಸ್ಥಳದಿಂದ ಓಡಿ ಹೋಗಿರಲಿಲ್ಲ. ನಾನೇ ಪೊಲೀಸರಿಗೆ ವಿಷಯ ತಿಳಿಸಿದ್ದೆ. ಇದುವರೆಗೂ ಎಲ್ಲದಕ್ಕೂ ಸಹಕಾರ ನೀಡಿದ್ದೇನೆ. ಮುಂದೆಯೂ ಆ  ಕುಟುಂಬಕ್ಕೆ ನನ್ನಿಂದೇ ಏನು ಮಾಡಬಹುದು ಮಾಡಲು ಸಿದ್ಧನಿದ್ದೇನೆ. ಘಟನೆ ಬಗ್ಗೆ ನನಗೂ ದುಃಖವಿದೆ. ದಯವಿಟ್ಟು ನನ್ನನ್ನು ಓಡಿ ಹೋಗಿದ್ದೇನೆ ಎಂದೆಲ್ಲಾ ಬಿಂಬಿಸಬೇಡಿ. ನಾನು ಚಿಕ್ಕವಯಸ್ಸಿನಲ್ಲೇ ಆಕ್ಸಿಡೆಂಟ್ ನಲ್ಲಿ ತಂದೆಯನ್ನು ಕಳೆದುಕೊಂಡಿದ್ದೆ. ಹೀಗಾಗಿ ಅವರ ನೋವು ಏನೆಂದು ನನಗೂ ಗೊತ್ತು. ಆದರೆ ಬೇಕೆಂದೇ ಮಾಡಿದ್ದಲ್ಲ. ನನ್ನಿಂದ ಹೀಗಾಗಬಹುದು ಎಂದು ನನಗೂ ಊಹೆಯೇ ಇರಲಿಲ್ಲ’ ಎಂದು ವಿವರಣೆ ನೀಡುತ್ತಾ ಕಣ್ಣೀರು ಹಾಕಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK12: ಗಿಲ್ಲಿ ಮೇಲೆ ಕೇಸ್, ಮನೆಯಲ್ಲೂ ಕಿರಿಕ್, ಚಾರ್ಮ್ ಕಳೆದುಕೊಳ್ಳುತ್ತಿದ್ದಾರಾ ಗಿಲ್ಲಿ

BBK12: ರಕ್ಷಿತಾಳಂತಹ ಪಾಪದವರನ್ನು ಬೈತೀರಿ, ಅಶ್ವಿನಿ ಗೌಡಗೆ ಬೈಯಲು ನಿಮಗೆ ಧೈರ್ಯ ಇಲ್ವಾ ಕಿಚ್ಚ ಸುದೀಪ್

ವಾರಣಾಸಿ ಮೂವಿ ಈವೆಂಟ್ ನಲ್ಲಿ ಆಂಜನೇಯ ಸ್ವಾಮಿಗೆ ಬೈದ ನಿರ್ದೇಶಕ ರಾಜಮೌಳಿ: ವಿವಾದ video

ಮನೆಗೆ ಗುಂಡೇಟು ಬೆನ್ನಲ್ಲೇ ನಟಿ ದಿಶಾ ಪಟಾನಿ ತಂದೆಗೆ ಶಸ್ತ್ರಾಸ್ತ್ರ ಪರವಾನಿಗೆ

ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಟಿ ಕೀರ್ತಿ ಸುರೇಶ್‌ಗೆ ಹೊಸ ಜವಾಬ್ದಾರಿ

ಮುಂದಿನ ಸುದ್ದಿ
Show comments