Webdunia - Bharat's app for daily news and videos

Install App

ಕೊಲೆ ಪ್ರಕರಣ: ಡೀಲ್‌ಗೆ ನೀಡಿದ್ದ ₹ 30 ಲಕ್ಷ ದರ್ಶನ್‌ ಆಪ್ತನ ಮನೆಯಲ್ಲಿ ಜಪ್ತಿ

Sampriya
ಶುಕ್ರವಾರ, 14 ಜೂನ್ 2024 (14:20 IST)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್‌ ಹೆಸರು ಹೇಳದಿರಲು ಡೀಲ್‌ ಮಾಡಲಾಗಿದ್ದ ₹ 30 ಲಕ್ಷ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ದರ್ಶನ್‌ ಆಪ್ತನೊಬ್ಬನ ಮನೆ ಮೇಲೆ ದಾಳಿ ನಡೆಸಿದ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ. ನಟ ಕೊಟ್ಟಿದ್ದ ₹ 30 ಲಕ್ಷ ಹಣವನ್ನು ಆಪ್ತನೊಬ್ಬನ ಮನೆಯಲ್ಲಿ ಇಡಲಾಗಿತ್ತು. ವಿಚಾರಣೆ ವೇಳೆ ಆರೋಪಿಗಳು ಹಣದ ಬಗ್ಗೆ ಬಾಯಿಬಿಟ್ಟಿದ್ದಾರೆ. ನಂತರ ಪೊಲೀಸರು ಹಣವನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.  

ರೇಣುಕಾಸ್ವಾಮಿ ಕೊಲೆ ಪ್ರಕರಣವನ್ನು ಒಪ್ಪಿಕೊಳ್ಳಲು, ಮೃತದೇಹ ಸಾಗಿಸಲು ಮತ್ತು ನಟ ದರ್ಶನ್‌ ಹೆಸರನ್ನು ಬಾಯಿಬಿಡದಿರಲು ಬಂಧಿತರ ಪೈಕಿ ಐವರಿಗೆ 30 ಲಕ್ಷಕ್ಕೆ ಸುಪಾರಿ ನೀಡಲಾಗಿತ್ತು ಎಂದು ಪೊಲೀಸ್‌ ತನಿಖೆಯಿಂದ ಗೊತ್ತಾಗಿತ್ತು.

ಮೃತದೇಹ ಯಾರಿಗೂ ಸಿಗದಂತೆ ಸಾಗಿಸಲು ಮೂವರು ಆರೋಪಿಗಳಿಗೆ ಮುಂಗಡವಾಗಿ ಒಟ್ಟು ₹ 5 ಲಕ್ಷ ಸಂದಾಯ ಮಾಡಲಾಗಿತ್ತು. ಉಳಿದ ಇಬ್ಬರು ಆರೋಪಿಗಳು ಜೈಲಿಗೆ ಹೋದ ಮೇಲೆ ಅವರ ಮನೆಯವರಿಗೆ ಹಣ ತಲುಪಿಸುವುದಾಗಿ ಹೇಳಲಾಗಿತ್ತು. ಈ ವಿಚಾರವನ್ನು ಆರೋಪಿಗಳು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಗಣೇಶ ಹಬ್ಬಕ್ಕೆ ಈ ಬಾರಿಯೂ ಜೈಲಿನಲ್ಲೇ ದಾಸ : ಪತ್ನಿ ವಿಜಯಲಕ್ಷ್ಮಿ ಏನ್ ಮಾಡಿದ್ರೂ ಗೊತ್ತಾ

ಬರ್ತ್ ಡೇಗೆ ಮನೆ ಬಳಿ ಬರಬೇಡಿ ಎಂದಿಲ್ಲ ಕಿಚ್ಚ ಸುದೀಪ್: ಫ್ಯಾನ್ಸ್ ಗೆ ದೊಡ್ಡ ಸರ್ಪ್ರೈಸ್

ಮಡೆನೂರು ಮನು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ರೆ ಶಿವಣ್ಣ ಏನು ಮಾಡಿದ್ರು ವಿಡಿಯೋ ನೋಡಿ

ಕೆಜಿಎಫ್ ನಟ ದಿನೇಶ್ ಮಂಗಳೂರು ಇನ್ನಿಲ್ಲ

ದರ್ಶನ್‌ ಫ್ಯಾನ್ಸ್‌ಗಳಿಗೆ ಡಬಲ್‌ ಗುಡ್‌ನ್ಯೂಸ್‌: ಮಹತ್ವದ ಸಂದೇಶ ಹಂಚಿಕೊಂಡ ವಿಜಯಲಕ್ಷ್ಮಿ

ಮುಂದಿನ ಸುದ್ದಿ
Show comments