ಬೆಂಗಳೂರು: ಮಮ್ಮಿ ಎಂಬ ಹಾರರ್ ಸಿನಿಮಾ ಮೂಲಕ ಹೊಸ ಅಲೆಯೆಬ್ಬಿಸಿದ ನಿರ್ದೇಶಕ ಲೋಹಿತ್ ಎಚ್. ಮತ್ತೊಂದು ಸಿನಿಮಾ ಮಾಡಲು ಹೊರಟಿದ್ದಾರೆ.
ಈ ಬಾರಿಯೂ ಭಾವನಾತ್ಮಕ ಥ್ರಿಲ್ಲರ್ ಕತೆಯನ್ನೇ ಆರಿಸಿಕೊಂಡಿದ್ದಾರೆ ಲೋಹಿತ್. ಇದು ಕೋಲ್ಕೊತ್ತಾದಲ್ಲಿ ನಡೆಯುವ ಕತೆಯನನ್ನೊಳಗೊಂಡಿದೆಯಂತೆ. ಕೋಲ್ಕೊತ್ತಾ ಮೂಲದ ಪ್ರಿಯಾಂಕ ಉಪೇಂದ್ರಗೆ ಕೋಲ್ಕತ್ತಾ ಕತೆಯನ್ನೇ ತಂದಿದ್ದಾರೆ ಲೋಹಿತ್.
ಇದಕ್ಕಿನ್ನೂ ಹೆಸರಿಟ್ಟಿಲ್ಲ. ಅಂತೂ ಮೊದಲ ಸಿನಿಮಾದಂತೆ ಎರಡನೇ ಸಿನಿಮಾದಲ್ಲೂ ಪ್ರೇಕ್ಷಕರನ್ನು ಬೆಚ್ಚಿ ಬೀಳಿಸಲಿದ್ದಾರೆ ಲೋಹಿತ್. ಆದರೆ ಒಂದೇ ತೆರನಾದ ಕತೆಯೆಂದರೆ ಪ್ರೇಕ್ಷಕರೂ ಕೈ ಹಿಡಿಯುತ್ತಾರಾ ಕಾದು ನೋಡಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ