ಮೃತ ಕಿರುತೆರೆ ನಟ ಹರೀಶ್ ಸಹೋದರ ನವೀನ್ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ ಎಂದು ಕಿರುತೆರೆ ನಟಿ ಮೇಘನಾ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
'ಅರಗಿಣಿ' ಧಾರವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ಮೇಘನಾ ಮತ್ತು ಹರೀಶ್ ನಡುವೆ ಪ್ರೀತಿ ಇತ್ತು. ಅವರಿಬ್ಬರು ಮದುವೆಗೆಯಾಗಲು ನಿರ್ಧರಿಸಿದ್ದು ಹರೀಶ್ ಮನೆಯಲ್ಲಿ ವಿರೋಧವಿತ್ತು. ಕೊನೆಗೆ ಬಲವಂತದಿಂದ ಅವರು ಮದುವೆಗೆ ಒಪ್ಪಿ ನಿಶ್ಚಿತಾರ್ಥ ಮಾಡಿಸಿದ್ದರು. ಬಳಿಕ ಮೇಘನಾ- ಹರೀಶ್ ಬೆಂಗಳೂರಿನಲ್ಲಿ ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದರು ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಹರೀಶ್ ಸಾವನ್ನಪ್ಪಿದ್ದು ಅವರಿಗೆ ಸೇರಿದ್ದ ಕಾರ್, ಬೈಕ್, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಮೇಘನಾ ಬಳಿ ಇದ್ದವು. ಅದನ್ನು ಪಡೆಯಲು ಬಂದಿದ್ದ ಹರೀಶ್ ಸಹೋದರ ನವೀನ್ ಮತ್ತು ಆತನ ಸಹಚರರು ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಲೈಂಗಿಕ ದೌರ್ಜನ್ಯ ನಡೆಸಿ ಜೀವಬೆದರಿಕೆ ಹಾಕಿದ್ದಾರೆ ಎಂದು ಮೇಘನಾ ರಾಜರಾಜೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತಾವು ಬೆದರಿಕೆ ಹಾಕಿದ್ದು ನಿಜ, ಅಣ್ಣನಿಗೆ ಸೇರಿದ್ದ ವಸ್ತುಗಳನ್ನು ಮೇಘನಾ ಮರಳಿ ಕೊಡಲು ನಿರಾಕರಿಸಿದಾಗ ಕೋಪದ ಭರದಲ್ಲಿ ಬೆದರಿಕೆ ಹಾಕಿದೆ. ಬಲವಂತದಿಂದ ಕಾರ್ ಕಿತ್ತುಕೊಂಡು ಬಂದಿರುವುದಾಗಿ ಹರೀಶ್ ಸಹೋದರ ನವೀನ್ ಹೇಳಿದ್ದಾರೆ.
ಇದು ಹರೀಶ್ ಆಸ್ತಿಗೆ ಸಂಬಂಧಿಸಿದ ಜಟಾಪಟಿ ಎಂದು ಮೇಲ್ನೋಟಕ್ಕೆ ಗೊತ್ತಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ