ಬೆಂಗಳೂರು: ತಮ್ಮ ಮೇಲೆ ಆರೋಪ ಮಾಡಿದ್ದ ನಿರ್ಮಾಪಕರ ವಿರುದ್ಧ ಕಿಚ್ಚ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇದರ ಬೆನ್ನಲ್ಲೇ ಆರೋಪ ಮಾಡಿದ್ದ ಎಂ.ಎನ್. ಕುಮಾರ್ ಫಿಲಂ ಚೇಂಬರ್ ಮುಂದೆ ಧರಣಿ ಕೂತಿದ್ದಾರೆ.
ಕಿಚ್ಚ ಸುದೀಪ್ ಮಾನನಷ್ಟ ಮೊಕದ್ದಮೆ ಹೂಡುತ್ತಿದ್ದಂತೇ ನಿರ್ಮಾಪಕ ಕುಮಾರ್ ನಾನು ಸುದೀಪ್ ವಿರುದ್ಧ ಆರೋಪ ಮಾಡಿಲ್ಲ. ಕಿಚ್ಚ ಸುದೀಪ್ ರಿಂದ ತಮಗಾದ ಹಣಕಾಸಿನ ನಷ್ಟಕ್ಕೆ ಪರಿಹಾರ ಕೊಡಿಸಿ ಎಂದು ವಾಣಿಜ್ಯ ಮಂಡಳಿಗೆ ಮನವಿ ಮಾಡಿದ್ದೆ ಎಂದಿದ್ದರು.
ಇದೀಗ ಫಿಲಂ ಚೇಂಬರ್ ಮುಂದೆ ಧರಣಿ ಕೂತಿರುವ ನಿರ್ಮಾಪಕ ಕುಮಾರ್ ನ್ಯಾಯ ಸಿಗುವವರೆಗೂ ಧರಣಿ ಕೂರುವುದಾಗಿ ಹೇಳಿದ್ದಾರೆ. ನಮ್ಮ ಪ್ರಕರಣ ನ್ಯಾಯಾಲಯದಲ್ಲಿ ಅಲ್ಲ, ವಾಣಿಜ್ಯ ಮಂಡಳಿಯಲ್ಲೇ ಇತ್ಯರ್ಥವಾಗಲಿ ಎಂದು ಆಗ್ರಹಿಸಿದ್ದಾರೆ.