ಬೆಂಗಳೂರು: ನಾಳೆ ಅಂದರೆ ಫೆಬ್ರವರಿ 12 ರಂದು ಸರ್ಪೈಸ್ ಸುದ್ದಿಯೊಂದು ಕೊಡುವುದಾಗಿ ನಟಿ ಮೇಘನಾ ಸರ್ಜಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಹಾಗಿದ್ದರೆ ಅವರು ಕೊಡಲಿರುವ ಆ ಸರ್ಪೈಸ್ ಸುದ್ದಿ ಯಾವುದು ಎಂದು ಅಭಿಮಾನಿಗಳು ಗೆಸ್ ಮಾಡಲು ಶುರು ಮಾಡಿದ್ದಾರೆ. ಚಿರಂಜೀವಿ ಸರ್ಜಾ ಅಕಾಲಿಕ ಮರಣದ ನಂತರ ಮೇಘನಾ ಬಾಳಿಗೆ ಬೆಳಕಾಗಿರುವುದು ಅವರ ಪುತ್ರ. ಇದುವರೆಗೆ ಮಗನನ್ನು ಬೇಬಿ ಚಿರು ಎಂದೇ ಮೇಘನಾ ಪರಿಚಯಿಸಿದ್ದರು. ಇದೀಗ ಬೇಬಿ ಚಿರುಗೆ ಅಧಿಕೃತವಾಗಿ ನಾಮಕರಣ ಮಾಡುತ್ತಿರಬಹುದು. ಆ ಹೆಸರನ್ನು ಬಹಿರಂಗಪಡಿಸುತ್ತಿರಬೇಕು ಎಂದು ಫ್ಯಾನ್ಸ್ ಊಹಿಸಿದ್ದಾರೆ. ಯಾವುದಕ್ಕೂ ಇದಕ್ಕೆ ನಾಳೆ ಉತ್ತರ ಸಿಗಲಿದೆ.
ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!