Select Your Language

Notifications

webdunia
webdunia
webdunia
Wednesday, 9 April 2025
webdunia

ಮೆಗಾಸ್ಟಾರ್ ಚಿರಂಜೀವಿ ಮಾಜಿ ಅಳಿಯ ಹೃದಯಾಘಾತದಿಂದ ಸಾವು

Shirish Bhardwaj

Sampriya

ಹೈದರಾಬಾದ್ , ಬುಧವಾರ, 19 ಜೂನ್ 2024 (15:14 IST)
Photo Courtesy X
ಹೈದರಾಬಾದ್‌: ಟಾಲಿವುಡ್‌ ಮೆಗಾಸ್ಟಾರ್ ಚಿರಂಜೀವಿ ಅವರ ಮಾಜಿ ಅಳಿಯ ಶಿರೀಶ್ ಭಾರಧ್ವಜ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

 ಶಿರೀಶ್ ಮತ್ತು ಮೆಗಾಸ್ಟಾರ್ ಚಿರಂಜೀವಿಯ ಪುತ್ರಿ ಶ್ರಿಜಾ ಕೊನೆಡೆಲಾ ಅವರನ್ನು ವಿವಾಹವಾಗಿದ್ದರು. ಅಸಲಿಗೆ ಈ ವಿವಾಹಕ್ಕೆ ಚಿರಂಜೀವಿ ಅವರ ತೀವ್ರ ವಿರೋಧವಿತ್ತು, ಹಾಗಾಗಿ ಕುಟುಂಬಕ್ಕೆ ತಿಳಿಯದೆ ಶಿರೀಶ್ ಹಾಗೂ ಶ್ರೀಜಾ ವಿವಾಹವಾಗಿದ್ದರು. ಆದರೆ, ಬಳಿಕ ಶ್ರಿಜಾ ಅವರು ಶೀರೀಶ್ ಅವರಿಂದ ವಿಚ್ಛೇದನ ಪಡೆದುಕೊಂಡಿದ್ದರು. 

ಶಿರೀಶ್ ಕಳೆದ ಕೆಲವು ತಿಂಗಳಿನಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಿದ್ದು, ಅದಕ್ಕೆ ಚಿಕಿತ್ಸೆ ಪಡೆಯುತ್ತಿದ್ದರಂತೆ. ಆದರೆ ಅವರು ಬುಧವಾರ ಬೆಳಿಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಶಿರೀಶ್ ಹಾಗೂ ಶ್ರೀಜಾ ಕುಟುಂಬದವರನ್ನು ಎದುರು ಹಾಕಿಕೊಂಡು ವಿವಾಹವಾಗಿದ್ದು ಭಾರಿ ವಿವಾದ ಎಬ್ಬಿಸಿತ್ತು. ಆ ಸಮಯದಲ್ಲಿ ಪವನ್ ಕಲ್ಯಾಣ್ ಸೇರಿದಂತೆ ಕೆಲವರಿಂದ ತಮಗೆ ಬೆದರಿಕೆ ಇರುವುದಾಗಿ ಶ್ರೀಜಾ ದೂರು ಸಹ ದಾಖಲಿಸಿದ್ದರು.

ಶ್ರೀಜಾ ಹಾಗೂ ಶಿರೀಶ್ ಮದುವೆಯಾದ ಕೆಲ ವರ್ಷಗಳಲ್ಲಿ ಅವರಿಗೆ ಮಗಳೊಬ್ಬಳು ಜನಿಸಿದಳು. ಅದಾದ ಬಳಿಕ ಶ್ರೀಜಾ ಶಿರೀಶ್​ರಿಂದ ವಿಚ್ಛೇದನ ಪಡೆದು ಮರು ಮದುವೆ ಆದರು. ಆ ಬಳಿಕ ಶಿರೀಶ್ ಸಹ ಮತ್ತೊಂದು ಮದುವೆಯಾದರು. ವೃತ್ತಿಯಲ್ಲಿ ವಕೀಲರಾಗಿದ್ದ ಶಿರೀಶ್, ಬಿಜೆಪಿ ಪಕ್ಷ ಸೇರ್ಪಡೆಗೊಂಡು ರಾಜಕೀಯ ಪಯಣವನ್ನೂ ಸಹ ಆರಂಭಿಸಿದ್ದರು. ಆದರೆ ರಾಜಕೀಯದಲ್ಲಿ ಹೆಚ್ಚಿಗೇನು ಸಾಧಿಸಲಾಗಲಿಲ್ಲ. ಶ್ರೀಜಾ ಹಾಗೂ ಶಿರೀಶ್ ಅವರ ಪುತ್ರಿಯನ್ನು ಮೆಗಾಸ್ಟಾರ್ ಚಿರಂಜೀವಿಯೇ ಸಾಕುತ್ತಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಲಿವುಡ್‌ನ ದಿ ಬ್ಲಫ್ ಚಿತ್ರೀಕರಣದ ವೇಳೆ ನಟಿ ಪ್ರಿಯಾಂಕಾ ಚೋಪ್ರಾ ಕೊರಳಿಗೆ ಗಾಯ