Select Your Language

Notifications

webdunia
webdunia
webdunia
webdunia

ಸಮುದ್ರ ದಂಡೆಯ ಮೇಲೆ ರಷ್ಯಾ ನಟಿಯ ಧ್ಯಾನ: ರಕ್ಕಸ ಅಲೆಗಳಿಗೆ ಸಿಲುಕಿ ಜೀವ ಕಳೆದುಕೊಂಡ ಕಮಿಲ್ಲಾ

Kamilla Belyatskaya No More,  yoga in Thailand, Thailand Koh Samui

Sampriya

ಥಾಯ್ಲೆಂಡ್ , ಮಂಗಳವಾರ, 3 ಡಿಸೆಂಬರ್ 2024 (17:50 IST)
Photo Courtesy X
ಸಮುದ್ರ ದಂಡೆಯ ಮೇಲೆ ಧ್ಯಾನದಲ್ಲಿ ನಿರತರಾಗಿದ್ದ ರಷ್ಯಾದ ಖ್ಯಾತ ನಟಿಯೊಬ್ಬರು ಅಲೆಗಳ ಹೊಡೆತಕ್ಕೆ ಕೊಚ್ಚಿಹೋಗಿ ಸಾವನ್ನಪ್ಪಿರುವ ಘಟನೆ ನಡೆದಿದೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ರಷ್ಯಾದ 24 ವರ್ಷದ ಭರವಸೆಯ ನಟಿ ಕಮಿಲ್ಲಾ ಬೆಲ್ಯಾಟ್ಸ್ಕಯಾ ಮೃತ ದುರ್ದೈವಿ. ಈಕೆ ತನ್ನ ಗೆಳೆಯನೊಂದಿಗೆ ಥಾಯ್ಲೆಂಡ್‌ ಪ್ರವಾಸ ಬಂದಿದ್ದರು. ಕೊಹ್ ಸಮುಯಿಯಲ್ಲಿನ ಬಂಡೆಯೊಂದರಲ್ಲಿ ಯೋಗಾಭ್ಯಾಸ ಮಾಡುವಾಗ ದುರಂತವಾಗಿ  ಆಕೆ ಪ್ರಾಣ ಕಳೆದುಕೊಂಡರು.

ವಿಡಿಯೋದಲ್ಲಿನ ಸಮುದ್ಯ ದಂಡೆಯ ಮೇಲೆ ನಟಿ ಧ್ಯಾನಕ್ಕೆ ಜಾರಿದ್ದರು. ಈ ವೇಳೆ ಧೈತ್ಯ ಅಲೆಯೊಂದು ಬಂಡೆಯ ಮೇಲೆ ಅಪ್ಪಳಿಸಿದೆ. ಈ ದೃಶ್ಯಗಳು ಹತ್ತಿರದ್ದಿಲ್ಲ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈಕೆ ಸಾಯುವ ಕೆಲವೇ ಕ್ಷಣಗಳ ಮುನ್ನಾ ಕೊಹ್ ಸಮುಯಿಯನ್ನು  "ಭೂಮಿಯ ಮೇಲಿನ ಅತ್ಯುತ್ತಮ ಸ್ಥಳ" ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದು ಪೋಸ್ಟ್ ಮಾಡಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಯುಐ ರಿಲೀಸ್‌ಗೂ ಮುನ್ನಾ ಕಟೀಲು ದೇವಿಯ ಆಶೀರ್ವಾದ ಪಡೆದ ಉಪೇಂದ್ರ