Publish Date: Mon, 29 Jun 2020 (09:04 IST)
Updated Date: Mon, 29 Jun 2020 (09:07 IST)
ಬೆಂಗಳೂರು: ಇತ್ತೀಚೆಗಷ್ಟೇ ತಮ್ಮ ಬಹುಕಾಲದ ಗೆಳೆಯ ಅರುಣ್ ಅವರ ಜತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಮಯೂರಿ ಮದುವೆ ಬಳಿಕ ತಮ್ಮ ಸಿನಿ ಕೆರಿಯರ್ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.
ಮದುವೆಯ ಬಳಿಕವೂ ಆಕ್ಟಿಂಗ್ ಮುಂದುವರಿಸುವೆ ಎಂದಿರುವ ಮಯೂರಿ ಇದಕ್ಕೆ ಮನೆಯವರ ಬೆಂಬಲವೂ ಇದೆ ಎಂದಿದ್ದಾರೆ. ಮದುವೆ ಬಳಿಕ ನಟಿಯರು ಆಕ್ಟಿಂಗ್ ಮಾಡುವುದು ಈಗ ಹೊಸ ವಿಚಾರವೇನಲ್ಲ. ನನಗೆ ಸೂಕ್ತ ಎನಿಸುವ ಯಾವುದೇ ಕ್ಯಾರೆಕ್ಟರ್ ಬಂದರೂ ಮಾಡುವೆ ಎಂದಿದ್ದಾರೆ ಮಯೂರಿ.