ಮಾಸ್ತಿಗುಡಿ ಚಿತ್ರದ ಖಳನಟರಾದ ಉದಯ್ ಮತ್ತು ಅನಿಲ್ ಇಬ್ಬರಿಗೂ ಈಜು ಬಾರದಿದ್ದರೂ ನಿರ್ದೇಶಕರು ಸ್ಟಂಟ್ ಮಾಡಿಸಲು ಹೋಗಿ ದುರಂತ ಘಟನೆ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ.
ಹೆಲಿಕಾಪ್ಟರ್‌ನಿಂದ ನೀರಿಗೆ ಬಿದ್ದು ನಟರ ಸಾವಿನ ಘಟನೆಗೆ ತಾಂತ್ರಿಕ ದೋಷ ಮತ್ತು ಚಿತ್ರದ ನಿರ್ದೇಶಕರ ನಿರ್ಲಕ್ಷ್ಯವೆ ಕಾರಣವಾಗಿದೆ. ದುನಿಯಾ ವಿಜಿಯನ್ನು ಮಾತ್ರ ರಕ್ಷಿಸುವಲ್ಲಿ ಚಿತ್ರತಂಡ ಸಫಲವಾಗಿದೆ.
ಸ್ಥಳಕ್ಕೆ ತೆರಳಬೇಕಾಗಿದ್ದ ದೋಣಿ ಇಂಜಿನ್ ಕೆಟ್ಟು ನಿಂತಿದ್ದರಿಂದ ದುರಂತ ಸಂಭವಿಸಿತು. ತೆಪ್ಪದ ಮೂಲಕ ಹೋಗುವಷ್ಟರಲ್ಲಿ ಇಬ್ಬರು ನೀರುಪಾಲಾಗಿದ್ದರು. ತೆಪ್ಪ ಸಾಗಿಸುತ್ತಿದ್ದ ವಿಜಯ್ ಮಾತ್ರ ಅಪಾಯದಿಂದ ಪಾರಾದರು ಎನ್ನಲಾಗಿದೆ.
ಬೆಂಗಳೂರಿನ ಕದಿರೇನಹಳ್ಳಿಯಲ್ಲಿರುವ ಅನಿಲ್ ನಿವಾಸದ ಮುಂದೆ ಜನಸಾಗರವೇ ನೆರೆದಿದ್ದು ಶೋಕವನ್ನು ವ್ಯಕ್ತಪಡಿಸುತ್ತಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ