Select Your Language

Notifications

webdunia
webdunia
webdunia
webdunia

ಮಾಸ್ತಿಗುಡಿ ಚಿತ್ರದ ಶೂಟಿಂಗ್: ಇಬ್ಬರು ಸಹನಟರು ನಾಪತ್ತೆ

ಮಾಸ್ತಿಗುಡಿ ಚಿತ್ರದ ಶೂಟಿಂಗ್: ಇಬ್ಬರು ಸಹನಟರು ನಾಪತ್ತೆ
ಬೆಂಗಳೂರು , ಸೋಮವಾರ, 7 ನವೆಂಬರ್ 2016 (15:26 IST)
ಮಾಸ್ತಿಗುಡಿ ಚಿತ್ರದ ಚಿತ್ರಿಕರಣದ ವೇಳೆ  ತಿಪ್ಪೆಗೊಂಡನಹಳ್ಳಿ ಕೆರೆಯಲ್ಲಿ 100 ಅಡಿ ಎತ್ತರದಿಂದ ಹೆಲಿಕಾಪ್ಟರ್‌‌ನಿಂದ ನೀರಿಗೆ ಧುಮುಕುವ ಕ್ಲೈಮ್ಯಾಕ್ಸ್ ಸನ್ನಿವೇಶದ ಶೂಟಿಂಗ್‌ ಸಂದರ್ಭದಲ್ಲಿ ದುರಂತ ಸಂಭವಿಸಿದೆ.
 
ನಟ ವಿಜಯ್ ಮತ್ತು ಸಹನಟರಾದ ಅನಿಲ್ ಮತ್ತು ಉದಯ್ ಶೂಟಿಂಗ್ ವೇಳೆ ಹೆಲಿಕಾಪ್ಟರ್‌ನಿಂದ ನೀರಿಗೆ ಹಾರಿದ್ದಾರೆ. ಅದರಲ್ಲಿ ಉದಯ್ ಮತ್ತು ಅನಿಲ್ ನಾಪತ್ತೆಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕೆರೆಯಲ್ಲಿ ಅನಿಲ್ ಮತ್ತು ಉದಯ್‌ಗಾಗಿ ಶೋಧ ಕಾರ್ಯ ನಡೆದಿದ್ದು, ಇಲ್ಲಿಯವರೆಗೆ ಪತ್ತೆಯಾಗಿಲ್ಲ ಎಂದು ಚಿತ್ರದ ನಿರ್ದೇಶಕರು ತಿಳಿಸಿದ್ದಾರೆ.
 
ಚಾಲೆಂಜಿಂಗ್ ಆಕ್ಷನ್ ದೃಶ್ಯವಿರುವುದರಿಂದ ಡ್ಯೂಪ್ ಬಳಸದಿರಲು ಸಹನಟರು ನಿರ್ಧರಿಸಿದ್ದರು. ನಾವು ಏನು ಅನ್ನುವುದನ್ನು ಪ್ರೂವ್ ಮಾಡುತ್ತೇವೆ ಎಂದು ಸಹನಟರು ಹೇಳಿದ್ದಾಗಿ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

100 ಕೋಟಿ ಗಳಿಸಿದ ಮೊದಲ ಮಲಯಾಳ ಸಿನಿಮಾ ಪುಲಿಮುರುಗನ್