Select Your Language

Notifications

webdunia
webdunia
webdunia
webdunia

ಮಾಸ್ತಿಗುಡಿ ಟ್ರೇಲರ್ ಯೂಟ್ಯೂಬಲ್ಲಿ ಸೂಪರ್ ಹಿಟ್

ಮಾಸ್ತಿಗುಡಿ ಟ್ರೇಲರ್ ಯೂಟ್ಯೂಬಲ್ಲಿ ಸೂಪರ್ ಹಿಟ್
Bangalore , ಸೋಮವಾರ, 23 ಜನವರಿ 2017 (16:50 IST)
ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಟ್ರೇಲರ್ ಬಿಡುಗಡೆಯಾದರ ನಾಲ್ಕೇ ದಿನಗಳಲ್ಲಿ ಭರ್ಜರಿ ಹಿಟ್ ಆಗಿದೆ. ಜನವರಿ 19ರಂದು ಬಿಡುಗಡೆಯಾದ ಟ್ರೇಲರ್ ಇದುವರೆಗೂ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗೆ ಒಳಗಾಗಿದೆ. ನಾಗಶೇಖರ್ ಆಕ್ಷನ್ ಕಟ್ ಹೇಳಿರುವ ಸಿನಿಮಾ.
 
ದುನಿಯಾ ವಿಜಯ್ ಗೆಟಪ್, ಆಕ್ಷನ್ ಸೀನ್‌ಗಳು ಚಿತ್ರದ ಪ್ರಮುಖ ಆಕರ್ಷಣೆ. ಕಾಡನ್ನು ರಕ್ಷಿಸಿ ಎಂಬ ಸಂದೇಶ ಗಮನಸೆಳೆಯುತ್ತದೆ. ಕೃತಿ ಖರಬಂಧ ಮತ್ತು ಅಮೂಲ್ಯಾ ನಾಯಕಿಯರಾಗಿರುವ ಚಿತ್ರದಲ್ಲಿ ಸುಹಾಸಿನಿ, ಡೈನಮಿಕ್ ಸ್ಟಾರ್ ದೇವರಾಜ್ ಸೇರಿದಂತೆ ಮುಂತಾದವರಿದ್ದಾರೆ.
 
ಈ ಚಿತ್ರದ ಇಬ್ಬರು ಖಳನಟರಾದ ಅನಿಲ್ ಮತ್ತು ಉದಯ್ ಕ್ಲೈಮ್ಯಾಕ್ಸ್ ಸನ್ನಿವೇಶದ ಚಿತ್ರೀಕರಣ ವೇಳೆ ತಿಪ್ಪಗೊಂಡನಹಳ್ಳಿ ಜಲಾಶಯದಲ್ಲಿ ಧುಮುಕಿ ದುರಂತ ಸಾವಪ್ಪಿದ್ದರು. ಈ ಘಟನೆ ಬಳಿಕ ಚಿತ್ರದ ನಿರ್ಮಾಪಕ ಪಿ ಸುಂದರ್ ಗೌಡ, ಸ್ಟಂಟ್ ಮಾಸ್ಟರ್ ರವಿವರ್ಮಾ, ನಿರ್ದೇಶಕ ನಾಗಶೇಖರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಜಾಮೀನು ಮೇಲೆ ಇವರೆಲ್ಲಾ ಹೊರಬಂದರು. ಈಗ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಾಕಷ್ಟು ಗಮನಸೆಳೆದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಕಿನಿಯಲ್ಲಿ ಸೆಕ್ಸಿ ಬೆನ್ನು ತೋರಿದ ರುಹಿ ಸಿಂಗ್