Select Your Language

Notifications

webdunia
webdunia
webdunia
webdunia

ಸ್ಯಾಂಡಲ್‍ವುಡ್‌ಗೆ ಅಡಿಯಿಟ್ಟ ಮನ್ನಾರಾ ಚೋಪ್ರಾ

ಸ್ಯಾಂಡಲ್‍ವುಡ್‌ಗೆ ಅಡಿಯಿಟ್ಟ ಮನ್ನಾರಾ ಚೋಪ್ರಾ
Bangalore , ಮಂಗಳವಾರ, 21 ಫೆಬ್ರವರಿ 2017 (13:33 IST)
ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ ಆಕ್ಷನ್ ಕಟ್‌ನಲ್ಲಿ ಮೂಡಿಬರುತ್ತಿರುವ ಚಿತ್ರ ’ರೋಗ್’. ಈ ಚಿತ್ರವನ್ನು ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ತೆರೆಗೆ ತರಲಾಗುತ್ತಿದೆ. ರಾಜಕಾರಣಿ, ನಿರ್ಮಾಪಕ, ವಿಧಾನ ಪರಿಷತ್ ಸದಸ್ಯ ಸಿ.ಆರ್. ಮನೋಹರ್ ನಿರ್ಮಾಣದ ಈ ಚಿತ್ರದ ಮೂಲಕ ಅವರ ಸಹೋದರ ಬೆಳ್ಳಿಪರದೆಗೆ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. 
 
ಈ ಚಿತ್ರಕ್ಕೆ ನಾಯಕಿ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಈಗ ಸಿಕ್ಕಿದೆ. ನಟಿ ಪ್ರಿಯಾಂಕಾ ಚೋಪ್ರಾ ಅವರ ಸೋದರ ಸಂಬಂಧಿ ಮನ್ನಾರಾ ಚೋಪ್ರಾ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಬಾಲಿವುಡ್‍ನ ’ಜಿದ್’ ಚಿತ್ರದಲ್ಲಿ ಅಭಿನಯಿಸಿದ್ದಾರೆ ಮನ್ನಾರಾ. ಇದರ ಜೊತೆಗೆ ತೆಲುಗಿನ ಜಕ್ಕನ್ನ, ಪ್ರೇಮಾ ಗೀಮಾ ಜಾನ್ತಾ ನೈ ಎಂಬ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
 
ಮನ್ನಾರಾ ಚೋಪ್ರಾ ಜತೆಗೆ ಮತ್ತೊಬ್ಬ ಬೆಡಗಿಯೂ ಚಿತ್ರದಲ್ಲಿದ್ದಾರೆ. ಆಕೆಯ ಹೆಸರು ಏಂಜೆಲಾ ಕ್ರಿಸ್ಲಿನ್ಜ್‌ಕಿ. ಖಡಕ್ ಹುಡುಗನ ಕಾದಲ್ ಕಥೆ ಎಂಬುದು ಚಿತ್ರದ ಟ್ಯಾಗ್‌ಲೈನ್. ಕನ್ನಡ ಚಿತ್ರರಂಗಕ್ಕೆ ಅಪ್ಪು ಮತ್ತು ಯುವರಾಜ ಎಂಬ ಸೂಪರ್ ಹಿಟ್ ಚಿತ್ರಗಳನ್ನು ನೀಡಿರುವ, ದಕ್ಷಿಣ ಭಾರತಕ್ಕೆ ಅನೇಕ ತಾರೆಗಳನ್ನು ಪರಿಚಯಿಸಿರುವ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಆಕ್ಷನ್ ಕಟ್‍ನಲ್ಲಿ ಚಿತ್ರ ಮೂಡಿಬರುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಸಿದ್ಧ ಟಿವಿ ಚಾನಲ್ ಪ್ರೋಗ್ರಾಮ್ ಹೆಡ್ ನನ್ನನ್ನ ಹೊರಗಡೆ ಕರೆದಿದ್ದ: ಟ್ವಿಟ್ಟರ್`ನಲ್ಲಿ ಸತ್ಯ ಬಿಚ್ಚಿಟ್ಟ ನಟಿ