Daily Horoscope
✕

ಮಲಯಾಳಂ ಹಿರಿಯ ನಟಿ ಕೆಪಿಎಸಿ ಲಲಿತಾ ಇನ್ನಿಲ್ಲ

Webdunia
ಬುಧವಾರ, 23 ಫೆಬ್ರವರಿ 2022 (08:50 IST)
ಕೊಚ್ಚಿ: ಮಲಯಾಳಂ ಚಿತ್ರರಂಗದ ಹಿರಿಯ ನಟಿ ಕೆಪಿಎಸಿ ಲಲಿತಾ ನಿಧನರಾಗಿದ್ದಾರೆ. ಅವರಿಗೆ 74 ವರ್ಷ ವಯಸ್ಸಾಗಿತ್ತು.

ಅನಾರೋಗ್ಯದಿಂದಾಗಿ ಲಲಿತಾ ಅವರನ್ನು ಕೆಲವು ದಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರ ಆಸೆಯಂತೆ ಮನೆಗೆ ಕರೆತರಲಾಯಿತು. ಇದೀಗ ತಮ್ಮ ಪುತ್ರ ಸಿದ್ಧಾರ್ಥ್ ಅವರ ಕೊಚ್ಚಿ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.

ಸುಮಾರು 550 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದ ಕೆಪಿಎಸಿ ಲಲಿತಾ ರಾಷ್ಟ್ರ ಪ್ರಶಸ್ತಿಯನ್ನೂ ಪಡೆದಿದ್ದರು. ತಮ್ಮ ಸಹಜ ನಟನೆಯಿಂದ ಪುಟ್ಟ ಪಾತ್ರವಾದರೂ ಜನರ ಮನಸ್ಸಲ್ಲುಳಿಯುವಂತೆ ಮಾಡುತ್ತಿದ್ದರು. ಇದೀಗ ಅವರು ನಿಧನರಾಗಿದ್ದು, ಇಂದು ಸಂಜೆ ಅವರ ತವರು ವಡಕ್ಕಾಂಚೇರಿಯ ನಿವಾಸದ ಬಳಿ ಅಂತ್ಯಕ್ರಿಯೆ ನೆರವೇರಲಿದೆ. ಮಲಯಾಳಂ ಸೂಪರ್ ಸ್ಟಾರ್ ಮಮ್ಮೂಟ್ಟಿ, ಜಯರಾಂ, ಸುರೇಶ್ ಗೋಪಿ ಸೇರಿದಂತೆ ಅನೇಕರು ಮೃತರ ಅಂತಿಮ ದರ್ಶನ ಪಡೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

BBK13: ಜಗಳ ನೋಡಿ ಸಾಕಾಯ್ತು, ತಾಂಡವ್ ರಾಮ್ ಗೆ ಇನ್ನಷ್ಟು ಹಾಡಲು ಹೇಳಿ.. ವೀಕ್ಷಕರ ಬೇಡಿಕೆ

BBK13: ಗಾನವಿ ರಿಲೇಷನ್ ಶಿಪ್ ಬಗ್ಗೆ ಬಾಯ್ಬಿಟ್ಟ ಸೌಂದರ್ಯ: ಪರ್ಸನಲ್ ವಿಷ್ಯಕ್ಕೆ ಬಂದ್ರೆ ಸಾಯಿಸಿಬಿಡ್ತೀನಿ ಎಂದ ಗಾನವಿ Video

ಚಾನೆಲ್ ನವರೇ ಹೇಳಿದ್ದಕ್ಕೆ ಅಂಥಾ ಬಟ್ಟೆ ಹಾಕಿದ್ದೆ: ಬಿಗ್ ಬಾಸ್ ನಿಂದ ಹೊರ ಬಂದ ಕುಮಾರಿ ಹೇಳಿಕೆ ಈಗ ವೈರಲ್ Video

BBK13: ಕಿಚ್ಚ ಸುದೀಪ್ ಹೇಳಿದ್ದು ನಿಜವಾಯ್ತು ಈ ವಾರ ಸ್ನೇಹಿತರ ನಡುವೆಯೇ ಧಗ ಧಗ

ದರ್ಶನ್ ಬೆನ್ನುನೋವು ಮತ್ತೆ ತೀವ್ರ: ಪರಪ್ಪನ ಅಗ್ರಹಾರ ಜೈಲಾಸ್ಪತ್ರೆಯಲ್ಲಿ ವೈದ್ಯಕೀಯ ಚಿಕಿತ್ಸೆ ಆರಂಭ

ಮುಂದಿನ ಸುದ್ದಿ
Show comments