Daily Horoscope

Select Your Language

Notifications

webdunia
webdunia
webdunia
webdunia

ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ಮಾತೃವಿಯೋಗ

Mohanlal mother
Photo Credit: X
ಕೊಚ್ಚಿ: ಮಲಯಾಳಂ ಸೂಪರ್ ಸ್ಟಾರ್ ಮೋಹನ್ ಲಾಲ್ ಗೆ ಮಾತೃ ವಿಯೋಗದ ದುಃಖ ಎದುರಾಗಿದೆ. ಮೋಹನ್ ಲಾಲ್ ತಾಯಿ ಶಾಂತಕುಮಾರಿ ಇಂದು ಕೊಚ್ಚಿಯಲ್ಲಿ ನಿಧನರಾಗಿದ್ದಾರೆ.

90 ವರ್ಷ ವಯಸ್ಸಿನ ಶಾಂತಕುಮಾರಿ ಎಲಮಕ್ಕರದಲ್ಲಿರುವ ತಮ್ಮ ಕುಟುಂಬದ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಜೀವನದ ಬಹುಭಾಗವನ್ನು ಅವರು ಪತಿ ವಿಶ್ವನಾಥನ್ ನಾಯರ್ ಜೊತೆ ಪತ್ತನಂತಿಟ್ಟದಲ್ಲಿ ಕಳೆದಿದ್ದರು.

ಆದರೆ ತೀರಾ ಇತ್ತೀಚೆಗೆ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದರು. ಇದಾದ ಬಳಿಕ ಅವರು ಮಗ ಮೋಹನ್ ಲಾಲ್ ಜೊತೆಗೇ ವಾಸವಿದ್ದರು. ಕೆಲವು ಸಮಯದ ಹಿಂದೆ ಮೋಹನ್ ಲಾಲ್ ತಮ್ಮ ತಾಯಿಯ ಹುಟ್ಟುಹಬ್ಬವನ್ನೂ ಆಚರಿಸಿಕೊಂಡಿದ್ದರು.

ಇದೀಗ ವಯೋಸಹಜ ಖಾಯಿಲೆಯಿಂದ ಅವರು ನಿಧನರಾಗಿದ್ದಾರೆ. ಮೋಹನ್ ಲಾಲ್ ತಾಯಿ ನಿಧನರಾದ ಸುದ್ದಿ ತಿಳಿದ ಬೆನ್ನಲ್ಲೇ ಮಲಯಾಳಂ ಸ್ಟಾರ್ ನಟ ಮಮ್ಮುಟ್ಟಿ ಸೇರಿದಂತೆ ಸಿನಿ ಗಣ್ಯರು ಮೋಹನ್ ಲಾಲ್ ನಿವಾಸಕ್ಕೆ ಬಂದು ಅಮ್ಮನ ಅಂತಿಮ ದರ್ಶನ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

‘ಜನ ನಾಯಗನ್’ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಮಹತ್ವದ ಘೋಷಣೆ ಮಾಡಿದ ವಿಜಯ್