Select Your Language

Notifications

webdunia
webdunia
webdunia
webdunia

ಬಾಲಕಿಯರ ಎದುರು ಗುಪ್ತಾಂಗ ಪ್ರದರ್ಶಿಸಿದ್ದಕ್ಕೆ ಅರೆಸ್ಟ್ ಆದ ಮಲಯಾಳಂ ನಟ ಶ್ರೀಜಿತ್

ಬಾಲಕಿಯರ ಎದುರು ಗುಪ್ತಾಂಗ ಪ್ರದರ್ಶಿಸಿದ್ದಕ್ಕೆ ಅರೆಸ್ಟ್ ಆದ ಮಲಯಾಳಂ ನಟ ಶ್ರೀಜಿತ್
ಕೊಚ್ಚಿ , ಗುರುವಾರ, 7 ಜುಲೈ 2022 (16:18 IST)
ಕೊಚ್ಚಿ: ಮಲಯಾಳಂ ಸಿನಿಮಾಗಳಲ್ಲಿ ಪೋಷಕ ನಟನ ಪಾತ್ರದ ಮೂಲಕ ಗುರುತಿಸಿಕೊಂಡಿರುವ ನಟ ಶ್ರೀಜಿತ್ ಈಗ ಅಪ್ರಾಪ್ತ ಬಾಲಕಿಯರ ಎದುರು ಗುಪ್ತಾಂಗ ಪ್ರದರ್ಶಿಸಿ ಅಶ್ಲೀಲ ವರ್ತನೆ ತೋರಿದ್ದಕ್ಕೆ ಅರೆಸ್ಟ್ ಆಗಿದ್ದಾರೆ.

ಜುಲೈ 4 ರಂದು ಘಟನೆ ನಡೆದಿತ್ತು. ಈ ಸಂಬಂಧ ದೂರು ನೀಡಲಾಗಿತ್ತು. ಅದರಂತೆ ಶ್ರೀಜಿತ್ ರನ್ನು ಬಂಧಿಸಲಾಗಿದೆ. ತಮ್ಮ ಕಾರಿನ ಬಳಿ ಇಬ್ಬರು ಅಪ್ರಾಪ್ತ ಬಾಲಕಿಯರು ಬರುತ್ತಿದ್ದಾಗ ಬಳಿ ಹೋದ ಶ್ರೀಜಿತ್ ಅವರ ಎದುರು ಗುಪ್ತಾಂಗ ಪ್ರದರ್ಶಿಸಿ ಅಶ್ಲೀಲ ವರ್ತನೆ ತೋರಿದ್ದರು.

ಪೊಲೀಸ್ ವಿಚಾರಣೆ ವೇಳೆ ಶ್ರೀಜಿತ್ ತಪ್ಪೊಪ್ಪಿಕೊಂಡಿದ್ದು ತನಗೆ ಮಾನಸಿಕ ಸಮಸ್ಯೆಯಿದ್ದು, ಇದರಿಂದಾಗಿ ಈ ರೀತಿ ನಡೆದುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಶ್ರೀಜಿತ್ ಮಲಯಾಳಂ ಹಿರಿಯ ನಟ ಟಿಜಿ ರವಿ ಪುತ್ರನಾಗಿದ್ದು, ಈ ಘಟನೆ ಅವರ ಕುಟುಂಬಕ್ಕೆ, ಚಿತ್ರರಂಗಕ್ಕೆ ತೀವ್ರ ಮುಜುಗರ ತಂದಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರಿಷಬ್ ಶೆಟ್ಟಿ ಬರ್ತ್ ಡೇಗೆ ಕಿರಿಕ್ ಪಾರ್ಟಿ ಬಗ್ಗೆ ಸುಳಿವು ಕೊಟ್ಟ ರಕ್ಷಿತ್ ಶೆಟ್ಟಿ