Webdunia - Bharat's app for daily news and videos

Install App

ಪತಿಯನ್ನು ನೆನೆದು ಭಾವುಕರಾದ ನಟಿ ಮಾಲಾಶ್ರೀ

Webdunia
ಸೋಮವಾರ, 21 ಜೂನ್ 2021 (09:10 IST)
ಬೆಂಗಳೂರು: ಇತ್ತೀಚೆಗಷ್ಟೇ ಕೊರೋನಾದಿಂದ ನಿಧನರಾದ ಪತಿ, ನಿರ್ಮಾಪಕ ಕೋಟಿ ರಾಮು ಅವರನ್ನು ನೆನೆದು ಪತ್ನಿ, ನಟಿ ಮಾಲಾಶ್ರೀ ಭಾವುಕರಾಗಿ ಸಾಮಾಜಿಕ ಜಾಲತಾಣದಲ್ಲಿ ಸಂದೇಶ ಬರೆದಿದ್ದಾರೆ.


ನಿನ್ನೆ ರಾಮು ಜನ್ಮ ದಿನವಿತ್ತು. ಈ ಸಂಬಂಧ ಮಾಲಾಶ್ರೀ ಭಾವುಕರಾಗಿ ಪತಿಗೆ ಹುಟ್ಟುಹಬ್ಬದ ಶುಭಾಶಯದ ಜೊತೆಗೆ ಸಂದೇಶವನ್ನೂ ಬರೆದಿದ್ದಾರೆ.

‘ನೀವು ನನ್ನ ಉಸಿರಲ್ಲಿ ಉಸಿರಾಗಿದ್ದಿರಿ. ನನ್ನ ಪಾಲಿಗೆ ದೇವರಾಗಿದ್ದಿರಿ. 23 ವರ್ಷಗಳ ಕಾಲ ನಿಮ್ಮ ಹುಟ್ಟುಹಬ್ಬವನ್ನು ನನ್ನ ಹುಟ್ಟುಹಬ್ಬವಾಗಿ ಆಚರಿಸಿ, ನನ್ನ ಉಸಿರಲ್ಲಿ ಉಸಿರಾಗಿದ್ದಿರಿ. ದಿನ ರಾತ್ರಿ ಆಗು ಹೋಗುಗಳನ್ನು ಆಲಿಸಿ, ನನಗೆ ಬುದ್ಧಿ ಹೇಳುವ ಗುರುಗಳಾಗಿದ್ರಿ. ಮಕ್ಕಳ ಜೀವನ ರೂಪಿಸಿದ ಪರ್ಫೆಕ್ಟ್ ತಂದೆಯಾಗಿದ್ದಿರಿ. ನೀವು ದೂರವಾದ ಕ್ಷಣದಿಂದ ಈ ಪತ್ರ ಬರೆಯುವವರೆಗೂ ಪ್ರತಿ ಕ್ಷಣವೂ ಕಣ್ಣಲ್ಲಿ ನೀರು ಹೆಪ್ಪುಗಟ್ಟುತ್ತಾನೇ ಇದೆ. ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ’ ಎಂದು ಮಾಲಾಶ್ರೀ ಭಾವುಕರಾಗಿ ಬರೆದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ವಿಷ್ಣುವರ್ಧನ್ ಇರುವ ಅಭಿಮಾನ್ ಸ್ಟುಡಿಯೋ ಜಾಗ ಮುಟ್ಟುಗೋಲು: ವಿವಾದಕ್ಕೆ ಟ್ವಿಸ್ಟ್

ಜೈಲು ಪಾಲಾದ ದರ್ಶನ್ ಪತ್ನಿಗೆ ಅಶ್ಲೀಲ ಕಮೆಂಟ್ಸ್‌: ವಿಜಯಲಕ್ಷ್ಮಿಗೆ ಮಹಿಳಾ ಆಯೋಗ ಅಭಯ

26 ವರ್ಷಗಳ ಬಳಿಕ ಮನೆಗೆ ಮಗ ಬಂದ: ಮಗನ ಆಗಮಕ್ಕೆ ಖುಷಿಯಾದ ನಟಿ ನವ್ಯಾ ನಾರಾಯಣ್‌

Anushree Marriage: ಗಂಡನಿಗೆ ತಮ್ಮ ಕೊಟ್ಟ ಭರ್ಜರಿ ಗಿಫ್ಟ್‌ ನೋಡಿ ಅನುಶ್ರೀ ಶಾಕ್‌

ಅದು ಮುಗಿದ ಅಧ್ಯಾಯ: ಕುಡ್ಲದ ಬೆಡಗಿ ಶಮಿತಾ ಶೆಟ್ಟಿ ಲವ್ ಬ್ರೇಕಪ್ ಬಗ್ಗೆ ಮುಕ್ತ ಮಾತು

ಮುಂದಿನ ಸುದ್ದಿ
Show comments