Select Your Language

Notifications

webdunia
webdunia
webdunia
Wednesday, 23 April 2025
webdunia

ದಂಡುಪಾಳ್ಯ-2 ಚಿತ್ರದ ಲೀಕ್ ಪ್ರಕರಣ ಪೊಲೀಸರಿಗೆ ದೂರು

ದಂಡುಪಾಳ್ಯ -2
ಬೆಂಗಳೂರು , ಮಂಗಳವಾರ, 25 ಜುಲೈ 2017 (15:15 IST)
ದಂಡುಪಾಳ್ಯ-2 ಪಾರ್ಟ್ ಚಿತ್ರದಲ್ಲಿನ ಕೆಲ ದೃಶ್ಯಗಳು ಲೀಕ್ ಆಗಿರುವ ಬಗ್ಗೆ ಪೊಲೀಸರಿಗೆ ಮತ್ತು ಸೈಬರ್ ಕ್ರೈಂ ವಿಭಾಗಕ್ಕೆ ದೂರು ನೀಡಲಾಗುವುದು ಎಂದು ಚಿತ್ರದ ನಿರ್ದೇಶಕ ಶ್ರೀನಿವಾಸ್ ರಾಜು ಹೇಳಿದ್ದಾರೆ.
 
 ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ ಗೋವಿಂದು ನೇತೃತ್ವದಲ್ಲಿ ಇಂದು ನಡೆದ ಸಭೆಯಲ್ಲಿ ಚಿತ್ರದ ನಿರ್ದೇಶಕ ಶ್ರೀನಿವಾಸ್ ರಾವ್ ಚರ್ಚೆ ನಡೆಸಿ ಮುಂದೆ ಇಂತಹ ಘಟನೆ ಪುನರಾವರ್ತನೆಯಾಗುವುದಿಲ್ಲ ಎಂದು ಭರವಸೆ ನೀಡಿದರು.
 
ಪಾರ್ಟ್ -2 ಚಿತ್ರಕ್ಕೆ ಏನು ಬೇಕೋ ಎಲ್ಲವನ್ನು ಮಾಡಿದ್ದೆ. ಆದ್ರೆ ಕೆಲ ದೃಶ್ಯಗಳನ್ನು ಸೆನ್ಸಾರ್ ಬೋರ್ಡ್ ತೆಗೆದುಹಾಕಿದೆ. ಉಳಿದ ದೃಶ್ಯಗಳು ಹೇಗೆ ಲೀಕ್ ಆಗಿವೆ ಎನ್ನುವುದು ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
 
ಚಿತ್ರದಲ್ಲಿ ಸೆಮಿನ್ಯೂಡ್‌ನಲ್ಲಿ ಲೀಕ್ ಆದ ದೃಶ್ಯವನ್ನು ಚಿತ್ರಿಕರಿಸಲಾಗಿತ್ತು. ಅದು ಹೇಗೆ ವೈರಲ್ ಆಗಿದೆ ಎನ್ನುವುದು ತಿಳಿದಿಲ್ಲ.
 
ನಟಿ ಸಂಜನಾ ಪ್ರತಿಕ್ರಿಯೆ: 
 
ಚಿತ್ರದಲ್ಲಿನ ದೃಶ್ಯಗಳು ಲೀಕ್ ಆಗಿರುವ ಬಗ್ಗೆ ನಾನು ಪೊಲೀಸರಿಗಾಗಲಿ ಅಥವಾ ಸೈಬರ್ ಕ್ರೈಂ ಇಲಾಖೆಗಾಗಲಿ ದೂರು ನೀಡುವುದಿಲ್ಲ. ಚಿತ್ರದ ದೃಶ್ಯ ಲೀಕ್ ಆಗಿದ್ದರಿಂದ ಚಿತ್ರದ ನಿರ್ದೇಶಕರೇ ಅಗತ್ಯವಾದ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಥಮ್ ದೂರಿನ ಬಗ್ಗೆ ನಟಿ ಸಂಜನಾ ಹೇಳಿದ್ದೇನು ಗೊತ್ತಾ..?