Webdunia - Bharat's app for daily news and videos

Install App

Lawyer Jagadish: ವಕೀಲ್ ಸಾಬ್ ಎಂದು ಓಡಾಡುತ್ತಿದ್ದ ಲಾಯರ್ ಜಗದೀಶ್ ಸ್ವಲ್ಪ ದಿನ ಒಳಗೇ ಇರ್ಲಿ ಬಿಡಿ

Krishnaveni K
ಶನಿವಾರ, 25 ಜನವರಿ 2025 (12:22 IST)
ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಹೋದಲ್ಲೆಲ್ಲಾ ಕಿರಿಕ್ ಮಾಡಿಕೊಂಡು ಸುದ್ದಿಯಾಗುತ್ತಿರುವುದು ಇದೇ ಮೊದಲಲ್ಲ. ಈಗ ತಮ್ಮ ಅಂಗರಕ್ಷಕರು ಗುಂಡು ಹಾರಿಸಿದ ತಪ್ಪಿಗೆ ಅವರನ್ನು ಬಂಧಿಸಲಾಗಿದ್ದು, ನೆಟ್ಟಿಗರು ಸ್ವಲ್ಪ ದಿನ ಒಳಗೇ ಇರ್ಲಿ ಬಿಡಿ ಎಂದು ಕಾಮೆಂಟ್ ಮಾಡಿದ್ದಾರೆ.

ತಮ್ಮ ಮನೆಯ ಎದುರು ಅಣ್ಣಮ್ಮ ಕೂರಿಸಿ ರಸ್ತೆ ಬ್ಲಾಕ್ ಮಾಡಿದ್ದಾರೆ ಎಂದು ಜಗದೀಶ್ ಮೊದಲು ಪೊಲೀಸರಿಗೆ ದೂರು ನೀಡಿದ್ದರು. ಈ ಕಾರಣಕ್ಕೆ ಅವರ ಮೇಲೆ ಕೆಲವರು ಹಲ್ಲೆ ನಡೆಸಿದ್ದರು. ಇದರ ನಡುವೆ ಅವರು ಪೊಲೀಸರೂ ನನ್ನ ವಿರುದ್ಧ ಇದ್ದಾರೆ ಎಂದು ಆರೋಪಿಸಿದ್ದರು.

ಅಷ್ಟೇ ಅಲ್ಲ, ತಮ್ಮ ವಿರುದ್ಧ ಗಲಾಟೆ ಮಾಡಲು ಬಂದವರನ್ನು ತಡೆಯಲು ಅಂಗರಕ್ಷಕರನ್ನಿಟ್ಟುಕೊಂಡಿದ್ದರು. ಆ ಅಂಗರಕ್ಷಕರು ಗಲಾಟೆ ಮಾಡಲು ಬಂದಿದ್ದ ಗುಂಪು ಚದುರಿಸಲು ಗುಂಡು ಹಾರಿಸಿದ್ದು ಈಗ ಪೊಲೀಸರಿಗೆ ಅವರ ವಿರುದ್ಧ ಪ್ರಬಲ ಸಾಕ್ಷ್ಯ ಸಿಕ್ಕಂತಾಗಿದೆ.

ಅಂಗರಕ್ಷಕರು ಸಾರ್ವಜನಿಕವಾಗಿ ಗುಂಡು ಹಾರಿಸಿದ್ದ ಗನ್ ಗೆ ಉತ್ತರ ಪ್ರದೇಶದ ಪರವಾನಗಿ ಇದೆ. ಹೀಗಾಗಿ ಇದನ್ನು ಇಲ್ಲಿ ಬಳಸುವಂತಿಲ್ಲ. ಇದೇ ಕಾರಣವನ್ನಿಟ್ಟುಕೊಂಡು ಅವರನ್ನು ಈಗ ಬಂಧಿಸಲಾಗಿದೆ.

ಅವರ ಬಂಧನದ ಸುದ್ದಿ ಬರುತ್ತಿದ್ದಂತೇ ನೆಟ್ಟಿಗರು ಪ್ರತಿಕ್ರಿಯಿಸಿದ್ದು ಇಷ್ಟು ದಿನ ವಕೀಲ್ ಸಾಬ್ ಎಂದು ಮನಸ್ಸಿಗೆ ಬಂದಂತೆ ನಡೆದುಕೊಳ್ಳುತ್ತಿದ್ದರು. ಸ್ವಲ್ಪ ದಿನ ಒಳಗೆ ಇರ್ಲಿ ಬಿಡಿ, ಆಗಲಾದರೂ ಕಿರಿಕ್ ಕೊಂಚ ಕಡಿಮೆಯಾಗುತ್ತದೋ ಏನೋ ಎಂದು ಕಾಮೆಂಟ್ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

ಮುಂದಿನ ಸುದ್ದಿ
Show comments