ಲವ್ವಲ್ಲಿ ಬಿದ್ದಿದ್ದಾರೆ ಲಕ್ಷ್ಮೀ ಬಾರಮ್ಮ ವೈಷ್ಣವ್ ಅಲಿಯಾಸ್ ಬ್ರೋ ಗೌಡ

Krishnaveni K
ಸೋಮವಾರ, 23 ಸೆಪ್ಟಂಬರ್ 2024 (11:26 IST)
Photo Credit: Instagram
ಬೆಂಗಳೂರು: ಲಕ್ಷ್ಮೀ ಬಾರಮ್ಮಾ ಧಾರವಾಹಿಯ ವೈಷ್ಣವ್ ಪಾತ್ರದ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಸಂಪಾದಿಸಿರುವ ನಟ ಶಮಂತ್ ಬ್ರೋ ಗೌಡಗೆ ಲವ್ ಆಗಿದ್ಯಂತೆ. ಈ ಬಗ್ಗೆ ಅವರೇ ಸುಳಿವು ಕೊಟ್ಟಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಈಗ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಶುಕ್ರವಾರದಿಂದ ಇಂದಿನಿಂದವರೆಗೆ ಸಂಜೆ ಅನುಬಂಧ ಅವಾರ್ಡ್ಸ್ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಕಲರ್ಸ್ ವಾಹಿನಿಯ ಧಾರವಾಹಿಗಳು, ರಿಯಾಲಿಟಿ ಶೋಗಳ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯಕ್ರಮ ಇದಾಗಿದೆ.

ಈ ಬಾರಿ ಮೆಚ್ಚಿನ ಅಳಿಯ ಪ್ರಶಸ್ತಿಯನ್ನು ವೈಷ್ಣವ್ ಪಾತ್ರಧಾರಿ ಬ್ರೋ ಗೌಡ ಪಡೆದುಕೊಂಡಿದ್ದಾರೆ. ಪ್ರಶಸ್ತಿ ಪಡೆದ ಬಳಿಕ ವೇದಿಕೆಯಲ್ಲಿ ಮಾತನಾಡಿದ ಅವರು ನಾನೂ ಕೂಡಾ ನಿಜ ಜೀವನದಲ್ಲೂ ಉತ್ತಮ ಅಳಿಯನಾಗಲು ಬಯಸುತ್ತೇನೆ ಎಂದರು. ಆಗ ಆಂಕರ್ ಅನುಪಮಾ ನಿಜ ಜೀವನದಲ್ಲಿ ಎಂದರೆ ಈಗಾಗಲೇ ಸಿಕ್ಕಿದ್ದಾರಾ ಯಾವ ಏರಿಯಾ ಎಂದು ಕೇಳಿದ್ದಾರೆ.

ಇದಕ್ಕೆ ಬ್ರೋ ಗೌಡ ‘ಹೌದು ಬೆಂಗಳೂರೇ.. ಯಾವ ಏರಿಯಾ ಅಂತ ಇನ್ನೂ ಡಿಸೈಡ್ ಆಗಿಲ್ಲ. ಈ ಬಾರಿ ಒಬ್ಬನೇ ಬಂದಿದ್ದೇನೆ. ಆದರೆ ಮುಂದಿನ ಸಾರಿ ಬರುವಾಗ ನಾನೂ ಕೂಡಾ ಜೋಡಿಯಾಗಿ ಬಂದು ಪ್ರಶಸ್ತಿ ತೆಗೆದುಕೊಳ್ಳಬಹುದು’ ಎಂದಿದ್ದಾರೆ. ಹೀಗಾಗಿ ಶಮಂತ್ ಜೀವನದಲ್ಲೂ ಪ್ರೀತಿಯ ಹುಡುಗಿಯ ಪ್ರವೇಶವಾಗಿದ್ದು ಸದ್ಯದಲ್ಲೇ ಮದುವೆಯಾಗುವುದು ಕನ್ ಫರ್ಮ್ ಆಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ಜೈ ನಾಳೆ ತೆರೆಗೆ, ಮಾವನ ಸಿನಿಮಾಗೆ ಶುಭ ಹಾರೈಸಿದ ಕೆಎಲ್ ರಾಹುಲ್

ಈ ರೀತಿ ನಡೆದುಕೊಳ್ಳುವುದಕ್ಕೆ ನಾಚಿಕೆಯಾಗುವುದಿಲ್ವ: ಪಾಪರಾಜಿಗಳ ಮೇಲೆ ಸನ್ನಿ ಡಿಯೋಲ್ ಗರಂ

ಲೇಡಿ ಸೂಪರ್ ಸ್ಟಾರ್‌ ನಯನಾತಾರ ದಂಪತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸರ್ಪಸಂಸ್ಕಾರ ಸೇವೆ

ಎಲ್ಲರೆದುರೇ ರಶ್ಮಿಕಾ ಮಂದಣ್ಣಗೆ ಮುತ್ತಿಕ್ಕಿದ ವಿಜಯ್ ದೇವರಕೊಂಡ video

ಆಸ್ಪತ್ರೆಯಿಂದ ಹೊರಬರುತ್ತಿದ್ದ ಹಾಗೇ ಯೋಗ ಬೆಸ್ಟ್ ಎಂದ ನಟ ಗೋವಿಂದ

ಮುಂದಿನ ಸುದ್ದಿ
Show comments