ಮೊದಲ ಮಗುವಿನ ನಿರೀಕ್ಷೆಯಲ್ಲಿ ಕೆಎಲ್‌ ರಾಹುಲ್‌, ಅಥಿಯಾ ಶೆಟ್ಟಿ, ಅಜ್ಜನಾಗುತ್ತಿದ್ದಾರೆ ಸುನೀಲ್‌ ಶೆಟ್ಟಿ

Sampriya
ಶುಕ್ರವಾರ, 8 ನವೆಂಬರ್ 2024 (18:30 IST)
Photo Courtesy X
ನವೆಂಬರ್ 5ರಂದು 32ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡ ಬಾಲಿವುಡ್ ನಟಿ ಅಥಿಯಾ ಶೆಟ್ಟಿ ಅವರು ಅಭಿಮಾನಿಗಳಿಗೆ ಗುಡ್‌ನ್ಯೂಸ್ ನೀಡಿದ್ದಾರೆ.

 2023ರ ಆರಂಭದಲ್ಲಿ ವೈವಾಹಿಕ ಜೀವನ ಪ್ರಾರಂಭಿಸಿದ ಬಾಲಿವುಡ್​ ನಟಿ ಅಥಿಯಾ ಶೆಟ್ಟಿ ಹಾಗೂ ಸ್ಟಾರ್​ ಕ್ರಿಕೆಟರ್​ ಕೆಎಲ್ ರಾಹುಲ್ ಶೀಘ್ರದಲ್ಲೇ ಪೋಷಕರಾಗಿ ಬಡ್ತಿ ಪಡೆಯಲಿದ್ದಾರೆ. ಈ ಬಗ್ಗೆ ಇಬ್ಬರು ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂನಲ್ಲಿ ಪ್ರೆಗ್ನೆನ್ಸಿ ಅನೌನ್ಸ್ ಮಾಡಿದ್ದಾರೆ.

2 ವರ್ಷಗಳಿಂದ ಪ್ರೀತಿಯಲ್ಲಿದ್ದ ಅಥಿಯಾ ಶೆಟ್ಟಿ ಹಾಗೂ ಕೆಎಲ್ ರಾಹುಲ್ 2023ರ ಜನವರಿಯಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇದೇ ಸಾಲಿನ ಮಾರ್ಚ್‌, ಏಪ್ರಿಲ್‌ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ಕೆಎಲ್‌ ರಾಹುಲ್ ಹಾಗೂ ಅಥಿಯಾ ಶೆಟ್ಟಿ ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಸುದ್ದಿ ಹರಿದಾಡಿತ್ತು. ಆದರೆ ಅದು ವದಂತಿಯಾಗಿತ್ತು.

ಇದೀಗ ಈ ಜೋಡಿ  ನಮ್ಮ ಆಶೀರ್ವಾದ 2025ರಲ್ಲಿ ಆಗಮಿಸುತ್ತಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇಬ್ಬರಿಗೂ ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟೀವ್ ಆಗಿರುವ ಈ ಜೋಡಿ ಆಗಾಗ ರೋಮ್ಯಾಂಟಿಕ್‌ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈಚೆಗೆ ಪತ್ನಿ ಅಥಿಯಾಗೆ ರಾಹುಲ್ ರೋಮ್ಯಾಂಟಿಗ್ ಆಗಿ ವಿಶ್ ಮಾಡಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಎಲ್ಲವನ್ನೂ ನೋಡು

ತಾಜಾ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್, ನಟ ಧನುಷ್‌ಗೆ ಬಾಂಬ್ ಬೆದರಿಕೆ

ನಂದಗೋಕುಲದ ಅಭಿದಾಸ್ ಈಗ ಲ್ಯಾಂಡ್ ಲಾರ್ಡ್ ನಲ್ಲಿ ಖಡಕ್ ಚಿಕ್ಕದಣಿ

ಕಾಂತಾರ ಚಾಪ್ಟರ್ 1 ದೊಡ್ಡ ಪರದೆಯಲ್ಲಿ ಸಿನಿಮಾ ನೋಡದವರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಏಕಾಏಕಿ ಠಾಣೆ ಮೆಟ್ಟಿಲೇರಿದ ಖ್ಯಾತ ನಟ ಚಿರಂಜೀವಿ, ಆಗಿದ್ದೇನು ಗೊತ್ತಾ

BB Season 12, ದೊಡ್ಮನೆಯಲ್ಲಿ ಈ ಜೋಡಿ ಲವ್‌ ಸ್ಟೋರಿ ಭಾರೀ ಇರಿಟೇಶನ್ ಎಂದ ನೆಟ್ಟಿಗರು

ಮುಂದಿನ ಸುದ್ದಿ
Show comments