Select Your Language

Notifications

webdunia
webdunia
webdunia
webdunia

ಸಖತ್ ವೈರಲ್ ಆಯ್ತು ಅಮಲಾ ಪೌಲ್ ಚುಂಬನ ದೃಶ್ಯ

ಸಖತ್ ವೈರಲ್ ಆಯ್ತು ಅಮಲಾ ಪೌಲ್ ಚುಂಬನ ದೃಶ್ಯ
Chennai , ಬುಧವಾರ, 15 ಫೆಬ್ರವರಿ 2017 (12:49 IST)
ನಟಿ ಅಮಲಾ ಪೌಲ್ ಸದ್ಯಕ್ಕೆ ಕನ್ನಡದ ಹೆಬ್ಬುಲಿ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಕಿಚ್ಚ ಸುದೀಪ್ ಚಿತ್ರದ ನಾಯಕ ನಟ. ಈ ವ್ಯಕ್ತಿಯೊಬ್ಬರೊಂದಿಗೆ ಬೆಡಗಿ ಮುದ್ದಾಡುತ್ತಿರುವ ಫೋಟೋ ಈಗ ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ. ಇಷ್ಟಕ್ಕೂ ಆ ವ್ಯಕ್ತಿ ಯಾರು? ಎಂಬುದು ಕೋಲಿವುಡ್‌ನಲ್ಲಿ ಭಾರಿ ಚರ್ಚೆಗೆ ಕಾರನವಾಗಿದೆ.
 
ಚಲನಚಿತ್ರ ನಿರ್ದೇಶಕ ವಿಜಯ್ ಅವರನ್ನು ಪ್ರೀತಿಸಿ ಮದುವೆಯಾಗಿ ಎರಡು ವರ್ಷ ಸಂಸಾರ ಜೀವನ ಕಳೆದು ಎಂಜಾಯ್ ಮಾಡಿದ ಅಮಲಾ ಆ ಬಳಿಕ ಗಂಡನಿಗೆ ಸೋಡಾಚೀಟಿ ಕೊಟ್ಟಳು. ಇದೀಗ ತನ್ನ ದೃಷ್ಟಿಯನ್ನು ಅಭಿನಯದ ಕಡೆಗೆ ಹೊರಳಿಸಿದ್ದಾರೆ. ತಮಿಳು ನಟ ಧನುಷ್ ಜೊತೆಗಿನ ಸಂಬಂಧದ ಬಗ್ಗೆ ಬಂದ ಸುದ್ದಿಯಿಂದ ತುಂಬಾ ಕಂಗಾಲಾಗಿದ್ದರು ಅಮಲಾ.
 
ಇತ್ತೀಚೆಗೆ ಕೇರಳಕ್ಕೆ ಭೇಟಿ ನೀಡಿದ್ದ ಅಮಲಾ, ಇನ್‍ಸ್ಟಾಗ್ರಾಮ್‌ನಲ್ಲಿ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ. ಆ ಫೋಟೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸದು ಮಾಡುತ್ತಿದೆ. ಆ ಫೋಟೋದಲ್ಲಿ ವ್ಯಕ್ತಿಯೊಬ್ಬರನ್ನು ಬಲವಾಗಿ ಅಪ್ಪಿಕೊಂಡು ಚುಂಬಿಸುತ್ತಿರುವ ಅಮಲಾ ಎಲ್ಲರ ಗಮನಸೆಳೆದಿದ್ದಾರೆ.
 
ಇಷ್ಟಕ್ಕೂ ಆ ಫೋಟೋದಲ್ಲಿರುವ ವ್ಯಕ್ತಿ ಯಾರು? ಅಮಾಲಾ ಪೌಲ್ ಬಾಯ್‌ಫ್ರೆಂಡ್ ಇರಬಹುದೇ? ಈ ಬಗ್ಗೆ ಕೆಲವರು ಸ್ವತಃ ಅಮಲಾ ಪೌಲ್ ಅವರನ್ನೇ ಕೇಳಿದ್ದು, ಆ ವ್ಯಕ್ತಿ ತನಗೆ ಫ್ರೆಂಡ್ ಮಾತ್ರ. ಅವರ ಹೆಸರು ಅಜಿತ್ ಮಿನನ್ ಎಂದಿದ್ದಾರೆ. ಅವರಿಗೆ ಈಗಾಗಲೆ ಮದುವೆಯಾಗಿದೆ ಎಂದೂ ಹೇಳಿದ್ದಾರೆ.
 
ಆದರೆ ಮುತ್ತಿನ ಸಂಗತಿ? ಈ ಬಗ್ಗೆ ಮಾತ್ರ ಏನೂ ಹೇಳುತ್ತಿಲ್ಲ. ಅಭಿಮಾನಿಗಳು ಮಾತ್ರ ಅಮಲಾ ಅವತಾರಕ್ಕೆ ಕಂಗಾಲಾಗಿದ್ದಾರೆ. ಫ್ರೆಂಡ್ ಅಂತಾರೆ, ಅವರಿಗೆ ಮದುವೆಯಾಗಿದೆ ಅಂತಾರೆ, ಇವರು ವಿಚ್ಛೇದನ ಪಡೆದಿದ್ದಾರೆ! ಏನಪ್ಪಾ ಇದೆಲ್ಲಾ ಕಥೆ ಎಂದು ಪರಪರ ಎಂದು ತಲೆಕೆರೆದುಕೊಳ್ಳುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಒಂಟಿಯಾಗಿ ಪ್ರೇಮಿಗಳ ದಿನಾಚರಣೆ ಆಚರಿಸಿದ ಪೂನಂ ಪಾಂಡೆ